ಮೋದಿಯದ್ದು ಸಂತೆ ಭಾಷಣ: ಬಿಕೆಸಿ

7

ಮೋದಿಯದ್ದು ಸಂತೆ ಭಾಷಣ: ಬಿಕೆಸಿ

Published:
Updated:
ಮೋದಿಯದ್ದು ಸಂತೆ ಭಾಷಣ: ಬಿಕೆಸಿ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಲಘುವಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಮಾಡಿರುವ 4–5 ಭಾಷಣಗಳಲ್ಲಿ ಅವರ ನೈಜ ಬಣ್ಣ ಬಯಲಾಗಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್‌ ಶನಿವಾರ ಟೀಕಿಸಿದರು.

‘ಬಿಜೆಪಿಯವರು ಬಳಸುತ್ತಿರುವ ಪದಪ್ರಯೋಗ ಆಘಾತಕಾರಿಯಾಗಿದೆ. ಪ್ರಧಾನಿ ಇತ್ತೀಚೆಗೆ ಬೆನ್ನುಬೆನ್ನಿಗೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮಾಡಿರುವ ಭಾಷಣ ಬಸ್‌ ನಿಲ್ದಾಣ ಅಥವಾ ಸಂತೆಯಲ್ಲಿ ನಿಂತು ಮಾಡಿದಂತೆ ಇತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.‌

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಾಯಿಯ ಮಾಂಸ ತಿನ್ನಲಿ’ ಎಂದು ಹೇಳಿಕೆ ಕೊಟ್ಟಿರುವ ಕಲ್ಲಡ್ಕ ಪ್ರಭಾಕರ್‌ ಭಟ್‌, ಮನುಷ್ಯ ರೂಪದಲ್ಲಿರುವ ರಾಕ್ಷಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ಇತಿಹಾಸ ಕುರಿತು ಪ್ರಧಾನಿ ಹೊಂದಿರುವ ಜ್ಞಾನ ಅತ್ಯಂತ ಕಡಿಮೆ. ತಾಂತ್ರಿಕ ವಿಷಯಗಳ ಬಗ್ಗೆ ಚರ್ಚೆ ಮಾಡಲು ಅವರು ಅಸಮರ್ಥರು.

–ಪ್ರೊ.ಬಿ.ಕೆ.ಚಂದ್ರಶೇಖರ್‌, ಕೆಪಿಸಿಸಿ ಉಪಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry