ಸ್ನೂಕರ್‌: ಭಾರತ ತಂಡಕ್ಕೆ ವಿಶ್ವಕಪ್‌ ಗರಿ

7
ಮಿಂಚಿದ ಪಂಕಜ್ ಅಡ್ವಾಣಿ, ಮನ್‌ನ್‌ ಚಂದ್ರ; ಪಾಕಿಸ್ತಾನಕ್ಕೆ ಸೋಲು

ಸ್ನೂಕರ್‌: ಭಾರತ ತಂಡಕ್ಕೆ ವಿಶ್ವಕಪ್‌ ಗರಿ

Published:
Updated:
ಸ್ನೂಕರ್‌: ಭಾರತ ತಂಡಕ್ಕೆ ವಿಶ್ವಕಪ್‌ ಗರಿ

ದೋಹಾ: ಬೆಂಗಳೂರಿನ ಪಂಕಜ್ ಅಡ್ವಾಣಿ ಮತ್ತು ಮನನ್ ಚಂದ್ರಾ ನೇತೃತ್ವದ ತಂಡವು ಶನಿವಾರ ಸ್ನೂಕರ್ ವಿಶ್ವಕಪ್ ಗೆದ್ದುಕೊಂಡಿತು.

ಐಬಿಎಸ್‌ಎಫ್‌ ಆಯೋಜಿಸಿದ್ದ ಟೂರ್ನಿಯ ರೋಚಕ ಫೈನಲ್‌ನಲ್ಲಿ ಭಾರತ ತಂಡವು 3–2 ರಿಂದ ಮೊಹಮ್ಮದ್ ಅಸೀಫ್ ಮತ್ತು ಬಾಬರ್ ಮಸೀಹಾ ಅವರಿದ್ದ ಪಾಕಿಸ್ತಾನ ತಂಡದ ವಿರುದ್ಧ ಜಯಿಸಿತು. ಐದು ಫ್ರೇಮ್‌ಗಳ ಹಣಾಹಣಿಯಲ್ಲಿ ಪಾಕ್ ತಂಡವು ಆರಂಭದಲ್ಲಿಯೇ 0–2ರಿಂದ ಮುನ್ನಡೆ ಸಾಧಿಸಿತ್ತು.

ನಂತರ ತಮ್ಮ ಅನುಭವದ ಕೈಚಳಕ ತೋರಿಸಿದ ಭಾರತದ ಜೋಡಿಯು ಎದುರಾಳಿಗೆ ತಿರುಗೇಟು ನೀಡಿತು. ಮೂರನೇ ಫ್ರೇಮ್‌ನಲ್ಲಿ ಭಾರತದ ಮನನ್‌ 39 ಬ್ರೇಕ್‌ ಪಾಯಿಂಟ್ಸ್‌ಗಳನ್ನು ತಂದುಕೊಟ್ಟರು. ಇದರಿಂದಾಗಿ ಜಯದ ಅವಕಾಶವನ್ನು ಉಳಿಸಿಕೊಂಡಿತು.

ನಾಲ್ಕನೇ ಫ್ರೇಮ್‌ನಲ್ಲಿ ಎದುರಾಳಿ ತಂಡದ ಬಾಬರ್ ಮಸಿಹಾ 20–1ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಅಡ್ವಾಣಿ ಅವರ ಚುರುಕಿನ ಆಟದಿಂದ ಭಾರತ 69 ಪಾಯಿಂಟ್ಸ್‌ಗಳಲ್ಲಿ ಮುನ್ನಡೆ ಗಳಿಸಿತು. ಇದರಿಂದ 2–2ರಲ್ಲಿ ಸಮಬಲವಾಯಿತು. ಕೊನೆಯ ಫ್ರೇಮ್‌ನಲ್ಲಿ ಪಾಕ್ ಜೋಡಿಯ ನಿಖರ ಆಟವನ್ನು ಮಟ್ಟ ಹಾಕಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತು.

ಮುಖ್ಯಾಂಶಗಳು

* ಬೆಂಗಳೂರಿನ ಪಂಕಜ್‌ 19 ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ.

* 3–2ರಿಂದ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡದ ಆಟಗಾರರು.

* ಕೊನೆಯಲ್ಲಿ ಭಾರತ ತಂಡ ಮಿಂಚಿನ ಆಟ ಆಡಿ ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry