ಅರ್ಜೆಂಟೀನಾಗೆ ಮಣಿದ ಭಾರತ

7

ಅರ್ಜೆಂಟೀನಾಗೆ ಮಣಿದ ಭಾರತ

Published:
Updated:
ಅರ್ಜೆಂಟೀನಾಗೆ ಮಣಿದ ಭಾರತ

ಇಪೊ, ಮಲೇಷ್ಯಾ: ಭಾರತ  ಹಾಕಿ ತಂಡವು ಶನಿವಾರ ಆರಂಭವಾದ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ 2–3 ಗೋಲುಗಳಿಂದ ಅರ್ಜೇಂಟಿನಾ ವಿರುದ್ಧ ಸೋತಿತು.

ಅರ್ಜೆಂಟೀನಾ ತಂಡದ ಡ್ರ್ಯಾಗ್‌ ಫ್ಲಿಕರ್ ಪರಿಣತ ಆಟಗಾರ ಗೊಂಜೆಲೊ ಪಿಲ್ಲೆಟ್‌ ದಾಖಲಿಸಿದ ಹ್ಯಾಟ್ರಿಕ್‌ ಗೋಲುಗಳಿಂದ ಭಾರತ ಹಿನ್ನಡೆ ಅನುಭವಿಸಿತು. ಮೊದಲ ಹತ್ತು ನಿಮಿಷಗಳ ಆಟದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕವಾಗಿ ಆಡಿದವು. ಬಳಿಕ ಅರ್ಜೆಂಟೀನಾ ಪಂದ್ಯದ ವೇಗವನ್ನು ಹೆಚ್ಚಿಸಿಕೊಂಡಿತು.

ಗೊಂಜೆಲೊ 13ನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದರು. 23ನೇ ನಿಮಿಷದಲ್ಲಿ ಗೊಂಜೆಲೊ ಮತ್ತೊಮ್ಮೆ ಚೆಂಡನ್ನು ಗುರಿ ಸೇರಿಸಿದರು. ನಂತರ ಭಾರತ ತಂಡವು ಆಕ್ರಮಣಕಾರಿಯಾಗಿ ಆಡಿತು. ಅಮಿತ್ ರೋಹಿದಾಸ್‌ 24ನೇ ನಿಮಿಷದಲ್ಲಿ ಗೋಲು ಹೊಡೆದರು. 32ನೇ ನಿಮಿಷದಲ್ಲಿ ಅಮಿತ್ ಇನ್ನೊಂದು ಗೋಲು ದಾಖಲಿಸಿ ಸಮಬಲ ಮಾಡಿಕೊಂಡರು.

ಆದರೆ 33ನೇ ನಿಮಿಷದಲ್ಲಿ ಗೊಂಜೆಲೊ ಮತ್ತೊಂದು ಗೋಲು ಹೊಡೆದು ತಿರುಗೇಟು ನೀಡಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ  ಪಂದ್ಯ ತಂಡವಾಗಿ ಆರಂಭವಾಯಿತು. ಭಾರತದ ತಲ್ವಿಂದರ್ ಅವರು ಚೆಂಡನ್ನು ಗುರಿ ಸೇರಿಸಲು ಮಾಡಿದ ಪ್ರಯತ್ನವನ್ನು ಎದುರಾಳಿ ತಂಡದ ಗೋಲ್‌ಕೀಪರ್ ತಡೆದರು. ಇದರಿಂದಾಗಿ ಭಾರತಕ್ಕೆ ಜಯಿಸಲು ಸಾಧ್ಯವಾಗಲಿಲ್ಲ.

ಭಾನುವಾರದ ಪಂದ್ಯ: ಭಾರತ–ಇಂಗ್ಲೆಂಡ್

ಸಮಯ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry