ಪ್ಲೇ ಆಫ್‌ಗೆ ಗೋವಾ ಎಫ್‌ಸಿ ತಂಡ ಲಗ್ಗೆ

7

ಪ್ಲೇ ಆಫ್‌ಗೆ ಗೋವಾ ಎಫ್‌ಸಿ ತಂಡ ಲಗ್ಗೆ

Published:
Updated:

ಜೆಮ್‌ಷೆಡ್‌ಪುರ: ಆತಿಥೇಯರನ್ನು ಅವರ ನೆಲದಲ್ಲೇ ಏಕಪಕ್ಷೀಯ ಮೂರು ಗೋಲುಗಳಿಂದ ಮಣಿಸಿದ ಗೋವಾ ಎಫ್‌ಸಿ ತಂಡದವರು ಇಂಡಿಯನ್‌ ಸೂಪರ್ ಲೀಗ್‌ನ (ಐಎಸ್‌ಎಲ್‌) ಪ್ಲೇ ಆಫ್‌ ಹಂತಕ್ಕೇರಿದರು.

ಭಾನುವಾರ ಸಂಜೆ ಇಲ್ಲಿ ನಡೆದ ಪಂದ್ಯದಲ್ಲಿ ಫೆರಾನ್ ಕೊರೊಮಿನಾಸ್ (29 ಮತ್ತು 51ನೇ ನಿಮಿಷ) ಹಾಗೂ ಮ್ಯಾನ್ಯುಯೆಲ್‌ ಲಾನ್ಜರೊಟ್‌ (69ನೇ ನಿ) ಗಳಿಸಿದ ಗೋಲುಗಳು ಗೋವಾದ ಕನಸನ್ನು ನನಸು ಮಾಡಿದವು.

ಇದು ಉಭಯ ತಂಡಗಳಿಗೂ ಮಹತ್ವದ ಪಂದ್ಯ ಆಗಿತ್ತು. ಇಲ್ಲಿ ಗೆದ್ದವರಿಗೆ ಪ್ಲೇ ಆಫ್‌ನಲ್ಲಿ ಆಡುವ ಅವಕಾಶವಿತ್ತು. ಲಭಿಸಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಗೋವಾ ತಂಡ ಯಶಸ್ಸು ಕಂಡಿತು.

ಪ್ರಥಮಾರ್ಧದಲ್ಲಿ 1–0 ಅಂತರದಿಂದ ಮುನ್ನಡೆ ಸಾಧಿಸಿದ್ದ ತಂಡ ನಂತರ ಸೋಲೊಪ್ಪಿಕೊಳ್ಳಲು ಸಿದ್ಧ ಇರಲಿಲ್ಲ. ದ್ವಿತೀಯಾರ್ಧದಲ್ಲೂ ಗೋಲು ಗಳಿಸಿದ ಕೊರೊಮಿನಾಸ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಶ್ರೇಯಸ್ಸು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry