8ರಂದು ಪುಟ್ಟಣ್ಣಯ್ಯಗೆ ‘ಹಸಿರು ನಮನ’

7
ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಸಚಿವರು, ಶಾಸಕರು, ಸಾಹಿತಿಗಳು, ಚಿಂತಕರು ಭಾಗಿ

8ರಂದು ಪುಟ್ಟಣ್ಣಯ್ಯಗೆ ‘ಹಸಿರು ನಮನ’

Published:
Updated:

ಪಾಂಡವಪುರ: ಪಟ್ಟಣದಲ್ಲಿ ಮಾರ್ಚ್‌ 8ರಂದು ‘ಜನ ಸಮುದಾಯದ ದನಿ ಪುಟ್ಟಣ್ಣಯ್ಯ ಅವರಿಗೆ ಹಸಿರು ನಮನ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.

‘ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ದುಡಿಯುವ ವರ್ಗದ ಜನರು ಭಾಗವಹಿಸಿ ಪುಟ್ಟಣ್ಣಯ್ಯ ಅವರಿಗೆ ಹಸಿರು ನಮನ ಸಲ್ಲಿಸಲಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಐದುದೀಪ ವೃತ್ತದಿಂದ ಪಾಂಡವ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸಮಾವೇಶ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು, ಅಧಿಕಾರಿಗಳು, ಚಿಂತಕರು, ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಾಹಿತಿ ದೇವನೂರ ಮಹಾದೇವ, ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿ, ನಿಡುಮಾಮಿಡಿ ಸ್ವಾಮೀಜಿ ಭಾಗವಹಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry