ಭಯೋತ್ಪಾದಕರ ಎರಡು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ: ರಾಮಲಿಂಗಾ ರೆಡ್ಡಿ

7

ಭಯೋತ್ಪಾದಕರ ಎರಡು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ: ರಾಮಲಿಂಗಾ ರೆಡ್ಡಿ

Published:
Updated:
ಭಯೋತ್ಪಾದಕರ ಎರಡು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ: ರಾಮಲಿಂಗಾ ರೆಡ್ಡಿ

ಮಂಗಳೂರು: ಕರಾವಳಿಯಲ್ಲಿ ಎರಡು ಭಯೋತ್ಪಾದಕರ ತಯಾರಿಕಾ ಫ್ಯಾಕ್ಟರಿಗಳಿವೆ. ಅವುಗಳನ್ನು ಮುಚ್ಚಿಸುವ ಕೆಲಸ ಆರಂಭವಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

' ಇಲ್ಲಿ ಸಂಘ ಪರಿವಾರದ ಸಂಘಟನೆಗಳು ಒಂದು ಕಡೆ‌ ಮತ್ತು ಇನ್ನೊಂದು ಕಡೆ ಪಿಎಫ್ಐ, ಎಸ್ ಡಿಪಿಐ ಭಯೋತ್ಪಾದಕರನ್ನು ಸೃಷ್ಟಿಸುತ್ತಿವೆ. ಎರಡೂ ಕಡೆಯವರ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಿಸಲು ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ' ಎಂದರು.

ಎರಡೂ ಕಡೆಯವರು ಈಗ ಸಮಬಲದಲ್ಲಿ ಇದ್ದಾರೆ. ಅವರನ್ನು ಬಗ್ಗುಬಡಿಯಲು ಪ್ರಬಲ ಕಾರ್ಯತಂತ್ರ ರೂಪಿಸಲಾಗಿದೆ. ಸಂಘಟನೆಗಳನ್ನು ನಿಷೇಧಿಸಿದರೆ ಮತ್ತೊಂದು ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸುತ್ತಾರೆ. ಕೊಲೆ, ಗಲಭೆ, ಹಲ್ಲೆಗಳು ಸಂಪೂರ್ಣ ನಿಲ್ಲಿಸುವುದು ಇಲಾಖೆಯ ಗುರಿ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry