ಸಂಭ್ರಮದ ಕರಗ ಮಹೋತ್ಸವ

ಶನಿವಾರ, ಮಾರ್ಚ್ 23, 2019
21 °C

ಸಂಭ್ರಮದ ಕರಗ ಮಹೋತ್ಸವ

Published:
Updated:
ಸಂಭ್ರಮದ ಕರಗ ಮಹೋತ್ಸವ

ಬೆಂಗಳೂರು: ಮಹದೇವಪುರ ಕ್ಷೇತ್ರದ ರಾಮಗೊಂಡನಹಳ್ಳಿಯಲ್ಲಿ ಧರ್ಮರಾಯಸ್ವಾಮಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಕರಗದ ಪೂಜಾರಿ ಅವರು ವಿಶೇಷವಾಗಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಕರಗವನ್ನು ಹೊತ್ತು ರಾತ್ರಿ 1ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿದರು. ಬೆಳಿಗ್ಗೆ 8ಕ್ಕೆ ದೇವಾಲಯಕ್ಕೆ ಕರಗ ವಾಪಸಾಯಿತು.

ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ವೀರಕುಮಾರರು ಅಲಗು ಸೇವೆ ಅರ್ಪಿಸಿದ್ದು ಆಕರ್ಷಕವಾಗಿತ್ತು. ಗಂಟೆನಾದ, ಪೊಂಬುವಾದ್ಯದೊಂದಿಗೆ ಕರಗ ಪ್ರದಕ್ಷಿಣೆ ಸಾಗಿತು. ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ದೇಗುಲ ಪ್ರದಕ್ಷಿಣೆ ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದೊಂದಿಗೆ ಹೆಜ್ಜೆ ಹಾಕಿದರು.

ದೇವಸ್ಥಾನದಲ್ಲಿ ವಹ್ನಿಕುಲ ಕ್ಷತ್ರಿಯ ಮುಖಂಡರಾದ ಎನ್.ಎ.ನಾರಾಯಣಸ್ವಾಮಿ ಅವರ ಮುಂದಾಳತ್ವದಲ್ಲಿ ಕರಗಕ್ಕೆ ವಾಲಗ ಸೇವೆ, ಫಲಾಭಿಷೇಕ, ಪಂಚಾಮೃತ ಅಭಿಷೇಕ, ಹಾಲು ಹೊಂಗಲು ಹಾಗೂ ಪೊಂಗಲು ಸೇವೆಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry