ಎರಡು ಕಡೆ ಸ್ಪರ್ಧೆ ಬೇಡ

7

ಎರಡು ಕಡೆ ಸ್ಪರ್ಧೆ ಬೇಡ

Published:
Updated:

ಚುನಾವಣೆ ಮತ್ತೆ ಬಂದಿದೆ. ಕೆಲವು ಅಭ್ಯರ್ಥಿಗಳು ಎರಡು ಕ್ಷೇತ್ರಗಳಿಂದ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ. ಇಂತಹ ಅಭ್ಯರ್ಥಿ ಒಂದು ವೇಳೆ ಎರಡೂ ಕಡೆ ಗೆದ್ದಲ್ಲಿ, ಯಾವುದಾದರೂ ಒಂದು ಕ್ಷೇತ್ರದಲ್ಲಿ ಪುನಃ ಚುನಾವಣೆ ನಡೆಸಬೇಕಾಗುತ್ತದೆ. ಮತ್ತೆ ಕೋಟ್ಯಂತರ ರೂಪಾಯಿ ಖರ್ಚು. ಇದನ್ನು ತಡೆಯುವುದು ಅಗತ್ಯ. ಅದಕ್ಕಾಗಿ ‘ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಬಹುದು’ ಎಂಬ ಕಾನೂನು ಜಾರಿಗೆ ತರಬೇಕು. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ.

– ಪಿ. ಜಯವಂತ ಪೈ, ಕುಂದಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry