ಹಾಕಿ: ಭಾರತ ಮಹಿಳಾ ತಂಡಕ್ಕೆ ಸತತ ಎರಡನೇ ಗೆಲುವು

ಭಾನುವಾರ, ಮಾರ್ಚ್ 24, 2019
31 °C

ಹಾಕಿ: ಭಾರತ ಮಹಿಳಾ ತಂಡಕ್ಕೆ ಸತತ ಎರಡನೇ ಗೆಲುವು

Published:
Updated:
ಹಾಕಿ: ಭಾರತ ಮಹಿಳಾ ತಂಡಕ್ಕೆ ಸತತ ಎರಡನೇ ಗೆಲುವು

ಇಂಚೆನ್‌: ದಕ್ಷಿಣ ಕೊರಿಯಾ ಎದುರಿನ ಹಾಕಿ ಸರಣಿಯಲ್ಲಿ ಭಾರತ ಮಹಿಳಾ ತಂಡದವರು ಗೆಲುವಿನ ಓಟ ಮುಂದುವರಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ರಾಣಿ ರಾಂಪಾಲ್‌ ಬಳಗ 3–2 ಗೋಲುಗಳಿಂದ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 2–0ರ ಮುನ್ನಡೆ ತನ್ನದಾಗಿಸಿಕೊಂಡಿದೆ. ಸೋಮವಾರ ನಡೆದಿದ್ದ ಮೊದಲ ಹೋರಾಟದಲ್ಲೂ ಭಾರತ ತಂಡ ಆತಿಥೇಯರ ಸವಾಲು ಮೀರಿತ್ತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡ 6ನೇ ನಿಮಿಷದಲ್ಲಿ ಖಾತೆ ತೆರೆಯಿತು. ಪೂನಂ ರಾಣಿ ಮೊದಲ ಗೋಲು ದಾಖಲಿಸಿದರು. 10ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಯುರಿಮ್‌ ಲೀ ಚೆಂಡನ್ನು ಗುರಿ ಸೇರಿಸಿದ್ದರಿಂದ 1–1ರ ಸಮಬಲ ಕಂಡುಬಂತು.

27ನೇ ನಿಮಿಷದಲ್ಲಿ ನಾಯಕಿ ರಾಣಿ ಗೋಲು ದಾಖಲಿಸಿದ್ದರಿಂದ ಭಾರತ ತಂಡ 2–1ರ ಮುನ್ನಡೆ ತನ್ನದಾಗಿಸಿಕೊಂಡಿತು. 31ನೇ ನಿಮಿಷದಲ್ಲಿ ಜಂಗೀಯುನ್‌ ಸಿಯೊ ಗೋಲು ಬಾರಿಸಿ 2–2ರ ಸಮಬಲಕ್ಕೆ ಕಾರಣರಾದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಭಾರತದ ಗುರ್ಜಿತ್‌ ಕೌರ್‌ ಅವಕಾಶ ನೀಡಲಿಲ್ಲ. 32ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು 3–2ರ ಮುನ್ನಡೆ ತಂದುಕೊಟ್ಟರು.

ಆ ನಂತರ ಕೊರಿಯಾದ ಆಟಗಾರ್ತಿಯರು ಸಮಬಲದ ಗೋಲು ದಾಖಲಿಸಲು ಹೋರಾಟ ಮುಂದುವರಿಸಿದರು. ಆದರೆ ಭಾರತದ ರಕ್ಷಣಾ ಕೋಟೆಯನ್ನು ಭೇದಿಸಲು ಆತಿಥೇಯರಿಗೆ ಆಗಲಿಲ್ಲ. ಸರಣಿಯ ಮೂರನೇ ಪಂದ್ಯ ಮಾರ್ಚ್‌ 8 ರಂದು ನಡೆಯಲಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry