ಹಿರಿಯ ರಂಗಭೂಮಿ ಕಲಾವಿದ ಎಲ್‌.ಜಿ. ದೇವಾಂಗಮಠ ನಿಧನ

ಮಂಗಳವಾರ, ಮಾರ್ಚ್ 26, 2019
26 °C

ಹಿರಿಯ ರಂಗಭೂಮಿ ಕಲಾವಿದ ಎಲ್‌.ಜಿ. ದೇವಾಂಗಮಠ ನಿಧನ

Published:
Updated:
ಹಿರಿಯ ರಂಗಭೂಮಿ ಕಲಾವಿದ ಎಲ್‌.ಜಿ. ದೇವಾಂಗಮಠ ನಿಧನ

ಧಾರವಾಡ: ಉತ್ತರ ಕರ್ನಾಟಕದ ಹಿರಿಯ ರಂಗಭೂಮಿ ಕಲಾವಿದ, ರವೀಂದ್ರನಗರ ನಿವಾಸಿ ಎಲ್.ಜಿ. ದೇವಾಂಗಮಠ (85) ಮಂಗಳವಾರ ನಿಧನರಾದರು. ಅವರಿಗೆ ಪುತ್ರಿ ಇದ್ದಾರೆ.

ಕಂಪನಿ ನಾಟಕಗಳ ಮೂಲಕ ರಂಗಭೂಮಿಯ ನಂಟು ಬೆಳೆಸಿಕೊಂಡ ಅವರು, ನಂತರ ತಮ್ಮದೇ ಆದ ತಂಡ ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ನಟ, ನಾಟಕಕಾರ, ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ಅವರ ನಾಟಕಗಳಲ್ಲಿ ಹಾಸ್ಯಕ್ಕೆ ವಿಶೇಷ ಪ್ರಾಧಾನ್ಯ ನೀಡುತ್ತಿದ್ದರು.

’ಎಲ್ಲಾರು ಅವ್ರ...’ ಎಂಬ ನಾಟಕವು ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶನಗೊಂಡಿತ್ತು. ‘ನನಗೆಲ್ಲಾ ಗೊತ್ತೈತಿ’, ‘ಹೆಂಡ್ತಿ ಬೇಕು ಹೆಂಡ್ತಿ’,  ‘ಸಂಭಾವಿತರಿಗಿದು ಕಾಲವಲ್ಲ’ ಸೇರಿದಂತೆ ಹಲವು ನಗೆ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದರು. ಅವರದೇ ರಚನೆಯ ‘ಬೇಡರ ಕಣ್ಣಪ್ಪ’ ನಾಟಕದಲ್ಲಿನ ಶಾಸ್ತ್ರಿ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತ್ತು. ‘ನೀಲಾ’ ಸೇರಿದಂತೆ ಹಲವು ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.

ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 11ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry