ಬಗೆ ಬಗೆ ಅಣಬೆ ಅಡಿಗೆ

7

ಬಗೆ ಬಗೆ ಅಣಬೆ ಅಡಿಗೆ

Published:
Updated:
ಬಗೆ ಬಗೆ ಅಣಬೆ ಅಡಿಗೆ

ಅಣಬೆಯ ಬಹುವಿಧ ತಿನಿಸುಗಳನ್ನು ಕಳೆದ ಐದಾರು ವರ್ಷಗಳಿಂದ ಗ್ರಾಹಕರಿಗೆ ಉಣಬಡಿಸುತ್ತಿದೆ ಹೋಟೆಲ್ ಆಯ್‌ಸ್ಟರ್. ಹೆಸರಘಟ್ಟದ ಕೊಡಗಿ ತಿರುಮಲಾಪುರದಲ್ಲಿರುವ ಈ ಹೋಟೆಲ್‍ ಅನ್ನು ಮಹಿಳೆಯರ ತಂಡವೇ ಮುನ್ನಡೆಸುತ್ತಿರುವುದು ವಿಶೇಷ.

ಹೋಟೆಲ್‌ ಒಳಗೆ ಕಾಲಿಟ್ಟ ಕೂಡಲೇ ಹೋಟೆಲ್‌ ಮಾಲೀಕರಾದ ಪವಿತ್ರಾ ಸ್ವಾಗತಿಸಿದರು. ಕೈಗೆ ಮೆನು ನೀಡಿ, ಅಣಬೆ ತಿನಿಸುಗಳನ್ನು ರುಚಿ ನೋಡಿ ಎಂದರು.

ಮಶ್ರೂಮ್ ಫ್ರೈಡ್‌ ರೈಸ್, ಮಶ್ರೂಮ್ ಬಿರಿಯಾನಿ, ರಾಗಿ ಬಲ್ ವಿತ್ ಮಶ್ರೂಮ್ ಕರಿ, ಮಶ್ರೂಮ್ ಮಸಾಲ, ಮಶ್ರೂಮ್ ಪೆಪ್ಪರ್ ಡ್ರೈ, ಮಶ್ರೂಮ್ ಮಂಚೂರಿ, ಮಶ್ರೂಮ್ ಚಿಲ್ಲಿ ಸೂಪ್‍... ಮೆನು ಪೂರ್ತಿ ಅಣಬೆಯೇ ತುಂಬಿಕೊಂಡಿತ್ತು. ಸೂಪ್‌ ರುಚಿ ನೋಡುವಾ ಎಂದು ಮಶ್ರೂಮ್ ಚಿಲ್ಲಿ ಸೂಪ್‍ ಹೇಳಿದೆ. ಹಸಿರು ಬಣ್ಣದಲ್ಲಿದ್ದ ಸೂಪ್‌ನಲ್ಲಿ ಸಣ್ಣ, ಸಣ್ಣ ಅಣಬೆ ಚೂರುಗಳು. ಖಾರ, ಉಪ್ಪು ಹಾಗೂ ಬೇಯಿಸಿದ ಅಣಬೆ ಚೂರುಗಳ ಸೂಪ್‌ ನಾಲಿಗೆಗೆ ರುಚಿಯೆನಿಸಿತು.

ನಂತರ ಹೊಸ ರುಚಿ ಪ್ರಯೋಗಕ್ಕೆ ಮಶ್ರೂಮ್‌ ಪೆಪ್ಪರ್‌ ಡ್ರೈ ಎಂದೆ. ಗರಿಗರಿಯಾಗಿ, ಬಿಸಿಯಾಗಿದ್ದ ಅಣಬೆ, ಕಾಳುಮೆಣಸಿನ ಮಿಶ್ರಣ ತಿನ್ನಲು ರುಚಿಯಾಗಿತ್ತು. ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡಿತು. ಹದವಾದ ಮಸಾಲೆ, ಸವಿಯಾದ ರುಚಿ ಜಿಹ್ವಾ ಚಾಪಲ್ಯವನ್ನು ಹೆಚ್ಚು ಮಾಡಿತು.

ಚಿಕ್ಕಬಾಣಾವರದ ಪವಿತ್ರಾ ಈ ಹೋಟೆಲ್‌ನ ಮಾಲೀಕರು. ಭಾರತೀಯ ತೋಟಗಾರಿಕೆ ಸಂಸ್ಥೆಯು ಅಯೋಜಿಸಿದ್ದ ಅಣಬೆ ಬೇಸಾಯ ತರಬೇತಿಗೆ ಸೇರಿಕೊಂಡಿದ್ದ ಅವರು, ತರಬೇತಿ ಮುಗಿದ ಬಳಿಕ ಅಣಬೆ ಕೃಷಿ ಆರಂಭಿಸಿದರು. ನಂತದ ದಿನಗಳಲ್ಲಿ ಅಣಬೆ ಹೋಟೆಲ್ ಮಾಡುವ ಅಲೋಚನೆ ಹೊಳೆಯಿತು.

ಆಯ್‌ ಸ್ಟರ್‌ ಮಹಿಳಾ ತಂಡ

‘ಹೋಟೆಲ್ ಮಾಡುವ ಅಲೋಚನೆ ಬಂದ ಕೂಡಲೇ ಅಣಬೆ ಅಡುಗೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿದೆ. ಮನೆಯಲ್ಲಿ ಒಂದಿಷ್ಟು ಅಡುಗೆಗಳನ್ನು ಪ್ರಯೋಗಿಸಿದೆ. ನನ್ನ ಗಂಡ ಚೆನ್ನಾಗಿದೆ ಎಂದು ಒಪ್ಪಿಕೊಂಡ ನಂತರ ಆತ್ಮವಿಶ್ವಾಸ ಹೆಚ್ಚಾಯಿತು’ ಎಂದು ಪವಿತ್ರಾ ತಾವು ಮಾಡಿಕೊಂಡ ತಯಾರಿಯನ್ನು ವಿವರಿಸುತ್ತಾರೆ. ಗಂಡನ ಮೇಲೆ ಪ್ರಯೋಗಿಸಿ ರೂಢಿಸಿಕೊಂಡ ಅಡುಗೆಗಳನ್ನೇ ಇನ್ನೂ ಐದು ಮಂದಿಗೆ ಕಲಿಸಿ ’ಹೋಟೆಲ್ ಆಯ್‌ಸ್ಟರ್’ ಆರಂಭಿಸಿದರು.

ಹೋಟೆಲ್‌ನಲ್ಲಿ ವಾರವಿಡೀ ಅಣಬೆ ಅಡುಗೆ ಲಭ್ಯ. ತಾಜಾ ಅಣಬೆಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಸಂಪರ್ಕಕ್ಕೆ– 94838 61120.

***

ಈ ಹೋಟೆಲ್ ನಲ್ಲಿ ನನಗೆ ಬಹಳ ಇಷ್ಟವಾಗುವುದು ಮಶ್ರೂಮ್ ಪೆಪ್ಪರ್ ಡೈ. ಅದು ಎಷ್ಟು ಚೆನ್ನಾಗಿ ಇರುತ್ತದೆ ಅಂದರೆ ಬಾಯಿಗೆ ಇಟ್ಟ ಕೂಡಲೇ ಕರಗುತ್ತದೆ. ಮಶ್ರೂಮ್ ಬಿರಿಯಾನಿ ಅಂತು ಹೇಳಿದರೆ ಸಾಲದು ತಿಂದು ನೋಡಬೇಕು. 

– ಸಿ.ಎಸ್.ಪ್ರೇಮಲತಾ, ಹೆಸರಘಟ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry