ಬದಲಾಗಲಿ ಮನೋಧರ್ಮ

7

ಬದಲಾಗಲಿ ಮನೋಧರ್ಮ

Published:
Updated:
ಬದಲಾಗಲಿ ಮನೋಧರ್ಮ

ಭಾರತದಲ್ಲಿ ಪುರುಷರ ಕ್ರಿಕೆಟ್‌ಗೆ ಇರುವ ಮನ್ನಣೆ ನಮಗೆ ಇಲ್ಲ. ಇದಕ್ಕೆ ಕಾರಣ ವೃತ್ತಿಪರತೆ. ಅವರಿಗೆ ಸಿಗುವಷ್ಟು ಅವಕಾಶಗಳು ನಮಗೆ ಸಿಗುತ್ತಿಲ್ಲ. ಐಪಿಎಲ್ ಮಾದರಿಯ ಟೂರ್ನಿಗಳು ಬರಬೇಕು. ಇದರಿಂದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ವಿಜಯಪುರದ ಹುಡುಗಿ ರಾಜೇಶ್ವರಿ ಗಾಯಕವಾಡ್‌.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದ ಭಾರತ ವನಿತೆಯರ ತಂಡ ಎರಡು ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಇಲ್ಲಿಯವರೆಗೂ ಭಾರತ ಮಹಿಳೆಯರ ತಂಡ ಒಂದೇ ಪ್ರವಾಸದಲ್ಲಿ ಎರಡು ಸರಣಿ (ಏಕದಿನ, ಟ್ವೆಂಟಿ–20) ಗೆದ್ದುಕೊಂಡ ದಾಖಲೆ ಇರಲಿಲ್ಲ. ಆದರೆ ಈ ಸವಾಲನ್ನು ಮಿಥಾಲಿ ರಾಜ್ ಬಳಗ ಯಶಸ್ವಿಯಾಗಿ ನಿಭಾಯಿಸಿದೆ.

‘ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಮಹಿಳೆಯರ ಆತ್ಮವಿಶ್ವಾಸವನ್ನು ತಗ್ಗಿಸುವ ಕೆಲಸ ಮಾಡುತ್ತಿವೆ. ಇದಕ್ಕೆ ನಾವು ಅಂಜುವುದಿಲ್ಲ. ಬಟ್ಟೆ ಹಾಗೂ ಬದುಕು ನಮ್ಮ ಆಯ್ಕೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ವಿಶ್ವಕಪ್ ಆಡುವುದಕ್ಕಿಂತ ಮುಂಚೆ ನಮ್ಮನ್ನು ಜನ ಹೆಚ್ಚಾಗಿ ಗುರುತಿಸುತ್ತಿರಲಿಲ್ಲ. ಈಗ ಜನರು ಮುತ್ತಿಕೊಂಡು ಮಾತನಾಡಿಸುತ್ತಾರೆ. ನಮ್ಮ ಬದುಕು ನಾಲ್ಕು ಜನರಿಗೆ ಮಾದರಿಯಾಗುವಂತಿದ್ದರೆ ಸಾಕು’ ಎಂದು ರಾಜೇಶ್ವರಿ ಹೇಳುತ್ತಾರೆ.

‘ಮಹಿಳಾ ಸಬಲೀಕರಣವನ್ನು ನಾವು ಯಾರಿಂದಲೂ ಆಪೇಕ್ಷಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಅದು ನಿರಂತರವಾಗಿ ಬದಲಾಗುತ್ತಿರುವ ಪ್ರಕ್ರಿಯೆ. ದಕ್ಷಿಣ ಆಫ್ರಿಕಾದಲ್ಲಿ ನಾವು ಸರಣಿ ಆಡಿದಾಗ ಅಲ್ಲಿಯೇ ಭಾರತ ಪುರುಷರ ತಂಡ ಕೂಡ ಆಡಿತು. ಎರಡೂ ಪಂದ್ಯಗಳು ಒಂದೇ ದಿನ ನೇರಪ್ರಸಾರವಾದವು. ಆದರೂ ಜನರು ನಮ್ಮ ಆಟವನ್ನು ನೋಡಿ ಪ್ರೋತ್ಸಾಹಿಸಿದರು. ಇದೆಲ್ಲಾ ಬದಲಾದ ಮನೋಧರ್ಮಗಳಿಗೆ ಉದಾಹರಣೆಯಾಗಿದೆ. ಸತತವಾಗಿ ಚೆನ್ನಾಗಿ ಆಡಿದರೆ ಪುರುಷರ ಕ್ರಿಕೆಟ್‌ಗೆ ಸರಿಸಮನಾದ ಜನಮನ್ನಣೆ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವ ನಮ್ಮಲ್ಲಿದೆ’ ಎನ್ನುತ್ತಾರೆ.

ನಿರೂಪಣೆ: ಮಾನಸ ಬಿ.ಆರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry