ನೋವಿನಲ್ಲೂ ಶತಕ ಸಿಡಿಸಿದ ಟೇಲರ್‌

ಶುಕ್ರವಾರ, ಮಾರ್ಚ್ 22, 2019
29 °C

ನೋವಿನಲ್ಲೂ ಶತಕ ಸಿಡಿಸಿದ ಟೇಲರ್‌

Published:
Updated:
ನೋವಿನಲ್ಲೂ ಶತಕ ಸಿಡಿಸಿದ ಟೇಲರ್‌

ಡ್ಯುನೆಡಿನ್‌: ತೊಡೆಯ ನೋವನ್ನು ಲೆಕ್ಕಿಸದೆ ಕೆಚ್ಚೆದೆಯ ಆಟ ಆಡಿದ ರಾಸ್‌ ಟೇಲರ್‌ (ಔಟಾಗದೆ 181;147ಎ, 17ಬೌಂ,6ಸಿ) ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿದರು.

ಟೇಲರ್‌ ಅವರ ವೃತ್ತಿಬದುಕಿನ ಶ್ರೇಷ್ಠ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಕಿವೀಸ್‌ ನಾಡಿನ ಬಳಗ 5 ಪಂದ್ಯಗಳ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು.

ಯೂನಿವರ್ಸಿಟಿ ಓವಲ್‌ ಮೈದಾನದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 335ರನ್‌ ಕಲೆಹಾಕಿತು. ಕಠಿಣ ಗುರಿಯನ್ನು ಕಿವೀಸ್‌ ನಾಡಿನ ತಂಡ 49.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ಕೇನ್‌ ವಿಲಿಯಮ್ಸನ್‌ ಬಳಗ ರನ್‌ ಖಾತೆ ತೆರೆಯುವ ಮುನ್ನವೇ ಆರಂಭಿಕ ಆಟಗಾರ ಕಾಲಿನ್‌ ಮನ್ರೊ ವಿಕೆಟ್‌ ಕಳೆದುಕೊಂಡಿತು. ಮಾರ್ಟಿನ್‌ ಗಪ್ಟಿಲ್‌ ಕೂಡ ವಿಕೆಟ್‌ ನೀಡಲು ಅವಸರಿಸಿದರು ಇವರು ಶೂನ್ಯಕ್ಕೆ ಔಟಾದರು.

ಬಳಿಕ ನಾಯಕ ವಿಲಿಯಮ್ಸನ್‌ (45; 48ಎ, 3ಬೌಂ, 1ಸಿ) ಮತ್ತು ಟೇಲರ್‌, ಸುಂದರ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 86ರನ್‌ ಕಲೆಹಾಕಿತು.

17ನೇ ಓವರ್‌ನಲ್ಲಿ ವಿಲಿಯಮ್ಸನ್‌ ಔಟಾದ ನಂತರ ಬಂದ ಟಾಮ್‌ ಲಥಾಮ್‌ (71; 67ಎ, 2ಬೌಂ, 3ಸಿ) ಅಬ್ಬರಿಸಿದರು. ಅವರು ಟೇಲರ್‌ ಜೊತೆ ನಾಲ್ಕನೇ ವಿಕೆಟ್‌ಗೆ 187ರನ್‌ ಗಳಿಸಿ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು.

ಆ ನಂತರ ಟೇಲರ್‌ ಐದನೇ ವಿಕೆಟ್‌ಗೆ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್ (23; 12ಎ, 2ಬೌಂ, 2ಸಿ) ಜೊತೆ 30 ರನ್‌ ಮತ್ತು ಹೆನ್ರಿ ನಿಕೊಲ್ಸ್‌ (ಔಟಾಗದೆ 13; 12ಎ,1ಸಿ) ಜೊತೆ ಮುರಿಯದ ಆರನೇ ವಿಕೆಟ್‌ ಪಾಲುದಾರಿಕೆಯಲ್ಲಿ 36ರನ್‌ ಸೇರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಇದಕ್ಕೂ ಮುನ್ನ ಎಯೊನ್‌ ಮಾರ್ಗನ್‌ ಸಾರಥ್ಯದ ಇಂಗ್ಲೆಂಡ್‌ ತಂಡದ ಜಾನಿ ಬೇಸ್ಟೊ (138; 106ಎ, 14ಬೌಂ,7ಸಿ) ಮತ್ತು ಜೋ ರೂಟ್‌ (102; 101ಎ, 6ಬೌಂ, 2ಸಿ) ಶತಕ ಗಳಿಸಿ ಮಿಂಚಿದ್ದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 335 (ಜೇಸನ್‌ ರಾಯ್‌ 42, ಜಾನಿ ಬೇಸ್ಟೊ 138, ಜೋ ರೂಟ್‌ 102, ಆದಿಲ್‌ ರಶೀದ್‌ 11, ಟಾಮ್‌ ಕರನ್‌ ಔಟಾಗದೆ 22; ಟಿಮ್‌ ಸೌಥಿ 87ಕ್ಕೆ1, ಟ್ರೆಂಟ್‌ ಬೌಲ್ಟ್‌ 56ಕ್ಕೆ2, ಇಶ್‌ ಸೋಧಿ 58ಕ್ಕೆ4, ಕಾಲಿನ್‌ ಮನ್ರೊ 53ಕ್ಕೆ2).

ನ್ಯೂಜಿಲೆಂಡ್‌: 49.3 ಓವರ್‌ಗಳಲ್ಲಿ 5 ವಿಕೆಟ್‌ಗೆ 339 (ಕೇನ್‌ ವಿಲಿಯಮ್ಸನ್‌ 45, ರಾಸ್‌ ಟೇಲರ್‌ ಔಟಾಗದೆ 181, ಟಾಮ್‌ ಲಥಾಮ್‌ 71, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 23, ಹೆನ್ರಿ ನಿಕೊಲ್ಸ್‌ ಔಟಾಗದೆ 13; ಕ್ರಿಸ್‌ ವೋಕ್ಸ್‌ 42ಕ್ಕೆ1, ಮಾರ್ಕ್‌ ವುಡ್‌ 65ಕ್ಕೆ1, ಟಾಮ್‌ ಕರನ್‌ 57ಕ್ಕೆ2, ಬೆನ್‌ ಸ್ಟೋಕ್ಸ್‌ 45ಕ್ಕೆ1).

ಫಲಿತಾಂಶ: ನ್ಯೂಜಿಲೆಂಡ್‌ಗೆ 5 ವಿಕೆಟ್‌ ಜಯ. 5 ಪಂದ್ಯಗಳ ಸರಣಿ 2–2ರಲ್ಲಿ ಸಮಬಲ.

ಪಂದ್ಯ ಶ್ರೇಷ್ಠ: ರಾಸ್‌ ಟೇಲರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry