ಸ್ತ್ರೀ ನಾಮವೂ ಉಂಟು!

7

ಸ್ತ್ರೀ ನಾಮವೂ ಉಂಟು!

Published:
Updated:

‘ಸ್ತ್ರೀಯರ ಹೆಸರಿನ ಜೊತೆ ಪುರುಷನಾಮ ಏಕೆ?’ ಎಂಬ ಕುಶಾಲನಗರದ ವಿನುತ (ವಾ.ವಾ., ಮಾ. 6) ಅವರ ಪ್ರಶ್ನೆಗೆ ಸಿ.ಪಿ. ನಾಗರಾಜ ಅವರು, ‘ಗಂಡು ಕಟ್ಟಿದ ನುಡಿ’ ಪತ್ರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿನುತ ಅವರಿಗೆ ನನ್ನದೊಂದು ಪ್ರತಿಕ್ರಿಯೆ; ಪುರುಷ ಹೊರಗೆ ಹೋಗಿ ಸಂಪಾದನೆ ಮಾಡುತ್ತಿದ್ದ. ಹಾಗಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದ. ಆದ್ದರಿಂದ ಸ್ತ್ರೀಯರು ತಮ್ಮನ್ನು ಗುರುತಿಸಿಕೊಳ್ಳಲು ಪುರುಷರ ಹೆಸರು ಸೇರಿಸಿಕೊಳ್ಳುತ್ತಿದ್ದರು. ಆದರೂ, ಸ್ತ್ರೀಯರನ್ನು ‘ಮನೆ ಒಡತಿ’ ಎಂದು ಪರಿಚಯಿಸುವ ರೂಢಿ ಇದೆಯಲ್ಲವೇ?

ಶಾತವಾಹನರ ಕಾಲದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನವಿತ್ತು. ಅಂದಿನ ಕಾಲದ ರಾಜರು ತಮ್ಮ ಹೆಸರಿನ ಮುಂದೆ ತಾಯಿಯ ಹೆಸರನ್ನು ಸೇರಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ಶಾತವಾಹನರ ಪ್ರಸಿದ್ಧ ದೊರೆ ಶಾತಕರಣಿ, ತನ್ನ ತಾಯಿ ಗೌತಮಿ ಬಾಲಶ್ರೀಯ ಹೆಸರನ್ನು ಸೇರಿಸಿ ‘ಗೌತಮಿಪುತ್ರ ಶಾತಕರಣಿ’ ಎಂದೇ ಕರೆಸಿಕೊಂಡಿದ್ದಾನೆ.

ಕೇರಳದ ನಂಬೂದಿರಿ ಸಮುದಾಯದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇದೆ. ಪ್ರಸ್ತುತ ಸ್ತ್ರೀ-ಪುರುಷ ಎಲ್ಲರೂ ಸಮಾನರಲ್ಲವೇ? ಪುರುಷರು ಸ್ತ್ರೀನಾಮ ಸೇರಿಸಿಕೊಡರೆ ಅದಕ್ಕೆ ವಿರೋಧ ಮಾಡುವವರು ಇದ್ದಾರೆಯೇ?

–ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry