ಹಾಡಿಗೆ ದನಿಯಾದ ಅದಾ

ಮಂಗಳವಾರ, ಮಾರ್ಚ್ 26, 2019
33 °C

ಹಾಡಿಗೆ ದನಿಯಾದ ಅದಾ

Published:
Updated:
ಹಾಡಿಗೆ ದನಿಯಾದ ಅದಾ

ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿರುವ ಅದಾ ಶರ್ಮಾ ಇದೀಗ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಶಕ್ತಿ ಚಿದಂಬರಂ ನಿರ್ದೇಶನದ ‘ಚಾರ್ಲಿ ಚಾಪ್ಲಿನ್‌ 2’ನಲ್ಲಿ ಚಿತ್ರದಲ್ಲಿ ಅವರು ನಟಿಸುತ್ತಿರುವುದಷ್ಟೇ ಅಲ್ಲ, ಹಾಡೊಂದಕ್ಕೆ ದನಿಯೂ ಆಗಿದ್ದಾರೆ. ಆದಾ ದನಿಯಲ್ಲಿರುವ ಹಾಡಿನ ರೆಕಾರ್ಡಿಂಗ್‌ ಮುಗಿದಿದೆ. ಚಿತ್ರದಲ್ಲಿ ಪ್ರಭುದೇವ್‌, ಪ್ರಭು ಹಾಗೂ ನಿಕ್ಕಿ ಗರ್ಲಾನಿ ಅಭಿನಯಿಸುತ್ತಿದ್ದಾರೆ.

ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುವ ಅದಾ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಾನು ಹಾಡುವ ಹಾಗೂ ಡಾನ್ಸ್ ಮಾಡುವ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದರು. ಆನ್‌ಲೈನ್‌ ಸಂದರ್ಶನವೊಂದರಲ್ಲಿ ತಮ್ಮ ಅಭಿನಯದ ತೆಲುಗು ಚಿತ್ರ ‘ಹಾರ್ಟ್‌ ಅಟ್ಯಾಕ್‌’ ಹಾಡೊಂದನ್ನು ಹಾಡಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದರು. ಹೀಗೆ ಅದಾ ಅವರ ಗಾಯನ ವೈಖರಿ ಕಂಡಿದ್ದ ಚಾರ್ಲಿ ಚಾಪ್ಲಿನ್‌ 2 ಸಿನಿಮಾ ತಂಡ ಹಿನ್ನೆಲೆ ಗಾಯನದ ಅವಕಾಶವನ್ನೂ ನೀಡಿತು. ಹಾಡಿಗೆ ಅಮರೀಶ್‌ ಅವರ ಸಂಗೀತ ಸಂಯೋಜನೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry