ಹಾಜರಾತಿ ನಿಯಮ ಶೇ 98 ಮತ

7

ಹಾಜರಾತಿ ನಿಯಮ ಶೇ 98 ಮತ

Published:
Updated:
ಹಾಜರಾತಿ ನಿಯಮ ಶೇ 98 ಮತ

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಹಾಜರಾತಿ ಕಡ್ಡಾಯ ಗೊಳಿಸಿರುವುದನ್ನು ಶೇ 98ರಷ್ಟು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.

*

ಕಾರ್ಖಾನೆಯಲ್ಲಿ ಸ್ಫೋಟ: 3 ಸಾವು

ಮುಂಬೈ: ಪಾಲಘರ್‌ ಜಿಲ್ಲೆಯ ಬೋಯಿಸರ್‌–ತಾರಾಪುರ ಕೈಗಾರಿಕಾ ಪ್ರದೇಶದಲ್ಲಿನ ರಾಮದೇವ್‌ ಕೆಮಿಕಲ್ಸ್‌ ಫ್ಯಾಕ್ಟರಿಯಲ್ಲಿ ಗುರುವಾರ ರಾತ್ರಿ ಬಾಯ್ಲರ್‌ ಸ್ಫೋಟಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ.

*

ತಾತ್ಕಾಲಿಕ ಚಿಹ್ನೆ

ನವದೆಹಲಿ: ತಾತ್ಕಾಲಿಕವಾಗಿ ಚಿಹ್ನೆ ನೀಡುವಂತೆ ಟಿ.ಟಿ.ವಿ. ದಿನಕರನ್‌ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಒಪ್ಪಿಕೊಂಡಿದೆ.

ತಮ್ಮ ನೇತೃತ್ವದ ಎಐಎಡಿಎಂಕೆ ಗುಂಪಿಗೆ ಪ್ರೆಶರ್‌ ಕುಕ್ಕರ್‌ ಅನ್ನು ಚಿಹ್ನೆಯಾಗಿ ನೀಡಬೇಕು ಮತ್ತು ತಾನು ಆಯ್ಕೆ ಮಾಡುವ ಹೆಸರಿಗೆ ಒಪ್ಪಿಗೆ ನೀಡಬೇಕು ಎಂದು ದಿನಕರನ್‌ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಮೂರು ವಾರದ ಒಳಗೆ ದಿನಕರನ್‌ ಅವರ ಬೇಡಿಕೆಗೆ ಸ್ಪಂದಿಸುವಂತೆ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದರು.

*

‘ನಕಲಿ’ ಮದರಸಾಗಳಿಗೆ ಅನುದಾನ?

ಲಖನೌ: ‘ನಕಲಿ' ಮದರಸಾಗಳಿಗೆ ಅನುದಾನ ನೀಡುತ್ತಿರುವುದರಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ವಾರ್ಷಿಕ ₹100 ಕೋಟಿ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.ಸರ್ಕಾರದ ಅನುದಾನ ಪಡೆಯಲು ಮದರಸಾಗಳು ಆನ್‌ಲೈನ್‌ ನೋಂದಣಿಗೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಉತ್ತರ ಪ್ರದೇಶ ಈ ವರ್ಷ ಚಾಲನೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry