ಮಹಿಳಾ ಪ್ರಯಾಣಿಕರಿಗಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ ಯಂತ್ರ

7

ಮಹಿಳಾ ಪ್ರಯಾಣಿಕರಿಗಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ ಯಂತ್ರ

Published:
Updated:

ಹೈದರಾಬಾದ್‌: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯಗಳಲ್ಲಿ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಯಂಚಾಲಿತ ಸ್ಯಾನಿಟರಿ ನ್ಯಾಪ್‌ಕಿನ್‌ ಯಂತ್ರಗಳನ್ನು ಅಳವಡಿಸಲಾಗಿದೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಕೊಡುಗೆಯಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ₹5 ನಾಣ್ಯ ಹಾಕಿ ಸ್ಯಾನಿಟರಿ ನ್ಯಾಪ್‌ಕಿನ್‌ ಪಡೆಯಬಹುದಾಗಿದೆ.

ಬಳಸಿದ ನ್ಯಾಪ್‌ಕಿನ್‌ಗಳ ವಿಲೇವಾರಿಗೂ ಯಂತ್ರಗಳನ್ನು ಅಳವಡಿಸಲಾಗಿದೆ. ವಿಮಾನ ನಿಲ್ದಾಣದ ಸ್ವಚ್ಛತೆ ನಿರ್ವಹಣಾ ತಂಡ ಇದರ ಉಸ್ತುವಾರಿ ವಹಿಸಲಿದೆ. ಪ್ಲಾಸ್ಟಿಕ್‌ ಮರುಬಳಕೆ ಯಂತ್ರಗಳು, ಹಿರಿಯ ನಾಗರಿಕರಿಗೆ ಲಿಫ್ಟ್‌, ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಮಕ್ಕಳಿಗೆ ಆಟವಾಡಲು ಜಾಗ ಸೇರಿದಂತೆ ಹಲವು ಸೌಲಭ್ಯಗಳನ್ನೂ ನಿಲ್ದಾಣದಲ್ಲಿ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry