ನನ್ನ ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ ನನ್ನ ಗೆಳತಿ ವಿಜಯಲಕ್ಷ್ಮಿ

7

ನನ್ನ ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ ನನ್ನ ಗೆಳತಿ ವಿಜಯಲಕ್ಷ್ಮಿ

Published:
Updated:
ನನ್ನ ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ ನನ್ನ ಗೆಳತಿ ವಿಜಯಲಕ್ಷ್ಮಿ

ನನ್ನ ಮತ್ತು ನನ್ನ ಗೆಳತಿಯ ಸಂಬಂಧ ೩೩ ವರ್ಷಗಳು ಹಳೆಯದು. ನಾವು ಭೇಟಿಯಾಗಿದ್ದು ೧೯೮೫ ತುಮುಕುರಿನ ಸಿದ್ದಗಂಗಾ ತಾಂತ್ರಿಕ ಕಾಲೇಜ್ ನಲ್ಲಿ. ಆಗಿನಿಂದಲೂ ನನ್ನ ಗೆಳತಿ ಆಟದಲ್ಲೂ ಮತ್ತು ಓದಿನಲ್ಲೂ ಸೈ!

ನಮ್ಮ ಇಂಜಿನಿಯರಿಂಗ್ ಮುಗಿದ ತಕ್ಷಣ ಇವಳು ೧೯೯೦ರಲ್ಲಿ ಮೊದಲು ಪ್ರಾಧ್ಯಾಪಕಿ ಹುದ್ದೆಗೆ ಕಾಲಿಟ್ಟು ನಮೆಲ್ಲರನ್ನು ಪ್ರೋತ್ಸಾಹಿಸಿ, ನಮನ್ನು ಪ್ರಾದ್ಯಾಪಕಿ ಹುದ್ದೆಗೆ ಬರಲು ಪ್ರೋತ್ಸಾಹಿಸಿದಳು. ಪ್ರಸ್ತುತ ನಾವಿಬ್ಬರೂ ಬಿ. ಎಮ್. ಎಸ್ ತಾಂತ್ರಿಕ ಕಾಲೇಜ್ ನಲ್ಲಿ ಪ್ರಾಧ್ಯಾಪಕ ರಾಗಿದ್ದೇವೆ. ಕಳೆದ ವರುಷ ಪಿಎಚ್ಡಿ ಮುಗಿಸಿದಲ್ಲದೆ ತನ್ನ ೫೦ನೇ ವರ್ಷದಲ್ಲಿ ದಿಟ್ಟ ಮತ್ತು ಧೈರ್ಯದಿಂದ ಸ್ಕ್ಯೂಬ ಡೈವಿಂಗ್ ಹವ್ಯಾಸಕ್ಕೆ ಕಾಲಿಟ್ಟು ನಮ್ಮೆಲ್ಲರನ್ನು ಆಶ್ಚರ್ಯ ಗೊಳಿಸಿದಳು. ನಮಲ್ಲಿ ಅನೇಕರು ನೀರಿನ ಹತ್ತಿರ ಹೋಗಲು ಸಹ ಹೆದರುತ್ತಾರೆ, ಆದರೆ ಇವಳು ಭಯವನ್ನು ಬಿಟ್ಟು ತನ್ನ ಕುಟುಂಬ ದವರೊಂದಿಗೆ ಸೇರಿ ಸ್ಕ್ಯೂಬ ಡೈವಿಂಗ್ ಮಾಡಿದ್ದಾಳೆ ಎಂದರೆ ಅದು ಮೆಚ್ಚುವಂತದ್ದೆ. ಇವಳು ಅಂಡಮಾನ್ ಐಲ್ಯಾಂಡ್, ಶ್ರೀಲಂಕಾ ಮತ್ತು ಕಳೆದ ವರುಷ ಮೇ ತಿಂಗಳಿನಲ್ಲಿ ಮಲೇಶಿಯಾ ದಲ್ಲಿನ ಮಾಬುಲ್ ಐಲ್ಯಾಂಡ್ ನಲ್ಲಿ ಡೈವಿಂಗ್ ಮಾಡಿದ್ದಾಳೆ. ಇವಳು ಸಮುದ್ರದಾಳಕ್ಕೆ ಈಜುವ ಫೋಟೋ ಮತ್ತು ವೀಡಿಯೋ ನೋಡಿ ನಮಗೂ ಆದಷ್ಟು ಬೇಗ ಸಮುದ್ರಕ್ಕೆ ಹೋಗಿ ಸ್ಕ್ಯೂಬ ಡೈವಿಂಗ್ ಮಾಡುವ ಛಲ ಮೂಡಿಸಿದ್ದಾಳೆ.  ಭಾರತದಲ್ಲಿ ಬೆರಳೆಣಿಕೆ ಆಷ್ಟು ಮಹಿಳಾ ಸ್ಕ್ಯೂಬ ಡೈವರ್ಸ್ ಗಳಲ್ಲಿ ನನ್ನ ಗೆಳತಿಯೂ ಒಬ್ಬಳು ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ತರುತ್ತದೆ! ಇದಲ್ಲದೆ ಇವಳು ಟೀವೀ ನಲ್ಲಿ ಸಾಕಷ್ಟು ಅಡಿಗೆ ಶೋ ಗಳನ್ನ ನೀಡಿದ್ದಾಳೆ. ನನ್ನ ಗೆಳತಿಯ ವಿನಮ್ರತೆ ಮತ್ತು ಸಾಹಸಗಳು ನನ್ನ ಜೀವನಕ್ಕೂ ಸ್ಫೂರ್ತಿ ನೀಡಿದೆ!

-ಡಾ.ಸುಮಾ ಎಂ.ಎಸ್

ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry