ಮಹಾರಾಷ್ಟ್ರದಲ್ಲಿ ರೈತರ ಬೃಹತ್ ಪ್ರತಿಭಟನೆಗೆ ಶಿವಸೇನೆ,ಎಂಎನ್‍ಎಸ್,ಎಎಪಿ ಬೆಂಬಲ

7

ಮಹಾರಾಷ್ಟ್ರದಲ್ಲಿ ರೈತರ ಬೃಹತ್ ಪ್ರತಿಭಟನೆಗೆ ಶಿವಸೇನೆ,ಎಂಎನ್‍ಎಸ್,ಎಎಪಿ ಬೆಂಬಲ

Published:
Updated:
ಮಹಾರಾಷ್ಟ್ರದಲ್ಲಿ ರೈತರ ಬೃಹತ್ ಪ್ರತಿಭಟನೆಗೆ ಶಿವಸೇನೆ,ಎಂಎನ್‍ಎಸ್,ಎಎಪಿ ಬೆಂಬಲ

ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಅಲ್ಲಿನ ರೈತರು ನಾಶಿಕ್‍ನಿಂದ ಮುಂಬೈವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ  30,000ಕ್ಕಿಂತಲೂ ಹೆಚ್ಚು ರೈತರು ಭಾಗಿಯಾಗಿದ್ದು, ಶಿವಸೇನಾ, ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮತ್ತು ಆಮ್ ಆದ್ಮಿ ಪಕ್ಷ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ರೈತರ ಈ ಬೃಹತ್ ಪ್ರತಿಭಟನಾ ಮೆರವಣಿಗೆ ಶನಿವಾರ ರಾತ್ರಿ ಮುಲುನಾಡ್‍ಗೆ ತಲುಪಿದ್ದು, ಭಾನುವಾರ ಮುಂಬೈಗೆ ತಲುಪಿದೆ. ರೈತರ ಕಷ್ಟಗಳಿಗೆ ಸ್ಪಂದಿಸದ ದೇವೇಂದ್ರ ಫಡಣವಿಸ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರುವ ರೈತರು ಸೋಮವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಮುಂಬೈನಲ್ಲಿ ಟ್ರಾಫಿಕ್
ಈ ಪ್ರತಿಭಟನಾ ಮೆರವಣಿಗೆಯಿಂದಾಗಿ ಮುಂಬೈನ ಹೆಚ್ಚನ ಭಾಗಗಳಲ್ಲಿ ಭಾರೀ ಟ್ರಾಫಿಕ್ ಸಮಸ್ಯೆಯುಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲವಡೆ ಪರ್ಯಾಯ ಮಾರ್ಗಗಳಲ್ಲಿ ವಾಹನ ಚಲಾಯಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ರಾಜಕೀಯ ಪಕ್ಷಗಳ ಬೆಂಬಲ
ರೈತ ಮುಖಂಡರ ಜತೆ ಮಾತನಾಡಿದ ನಂತರ ನಾವು ಪ್ರತಿಭಟನೆಗೆ ಬೆಂಬಲ ನೀಡಿದ್ದೇವೆ ಎಂದು ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಆದಾಗ್ಯೂ, ಭಾನುವಾರ ತಾವೂ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ.
ಶನಿವಾರ ರಾತ್ರಿ ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂದೆ ಅವರು ರೈತ ಮುಖಂಡರನ್ನು ಭೇಟಿಯಾಗಿ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಪಕ್ಷದ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿರುವುದಾಗಿ ತಿಳಿದ್ದಾರೆ.
ಸೇನಾ, ಎಂಎನ್‍ಎಸ್, ಎಎಪಿ ಮತ್ತು ಇತರ ಕೆಲವು ಸಾಮಾಜಿಕ ಸಂಘಟನೆಗಳೂ ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ನಮಗೆ ಬೆಂಬಲ ನೀಡಲು ಯಾರೇ ಬಂದರೂ ಅದನ್ನು ನಾವು ಅದನ್ನು ಸ್ವೀಕರಿಸುತ್ತೇವೆ ಎಂದು ಸಿಪಿಐ(ಎಂ) ಪಕ್ಷದ ಸಂಘಟನೆಯಾಗಿರುವ ಅಖಿಲ ಭಾರತೀಯ ಕಿಸಾನ್ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ನವಾಲೆ ಹೇಳಿದ್ದಾರೆ.

ರೈತರ ಬೇಡಿಕೆ ಏನು?
ಸಾಲ ಮನ್ನಾ ಮಾಡಬೇಕು, ಅರಣ್ಯ ಭೂಮಿಗಳನ್ನು ಬೇಸಾಯಗಾರರಿಗೆ ನೀಡಬೇಕು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕೆಂದು ರೈತರು ಬೇಡಿಕೆಯೊಡ್ಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry