ಪ್ರವಾಸದ ವೇಳೆ ಇವುಗಳ ಮರೆಯದಿರಿ

7

ಪ್ರವಾಸದ ವೇಳೆ ಇವುಗಳ ಮರೆಯದಿರಿ

Published:
Updated:
ಪ್ರವಾಸದ ವೇಳೆ ಇವುಗಳ ಮರೆಯದಿರಿ

ಪ್ರವಾಸದ ತಯಾರಿ ಸಮರ್ಪಕವಾಗಿರದಿದ್ದರೆ ಯಾವುದಾದರೊಂದು ಅಗತ್ಯ ವಸ್ತು ಮರೆತು ಹೋಗುವುದು ಸಹಜ. ಇನ್ನೊಂದು ಊರಿಗೆ ಹೋಗಿ ಪರದಾಡುವುದಕ್ಕಿಂತ ಪೂರ್ವ ತಯಾರಿ ಮಾಡಿಕೊಂಡರೆ ಪ್ರವಾಸದ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸಬಹುದು

*ಪಟ್ಟಿ ಸಿದ್ಧಪಡಿಸಿಕೊಳ್ಳಿ: ಪ್ರವಾಸ ಹೋಗುವ ನಿರ್ಧಾರ ಮಾಡಿದ ತಕ್ಷಣ ಯಾವ್ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಶಾಪಿಂಗ್‌ ಮಾಡಲು ನಿಮ್ಮ ಬಿಡುವಿನ ಸಮಯ, ಬಜೆಟ್‌... ಎಲ್ಲವೂ ಈ ಪಟ್ಟಿಯಲ್ಲಿರಲಿ.

*ತೂಕದ ಮಿತಿ ಮರೆಯದಿರಿ: ವಿಮಾನದಲ್ಲಿ ವಸ್ತುಗಳ ತೂಕಕ್ಕೆ ಮಿತಿ ಇರುತ್ತದೆ. ಹೆಚ್ಚು ಭಾರ ಕೊಂಡೊಯ್ಯಲು ಅನುಮತಿ ಇರುವುದಿಲ್ಲ. ಅಲ್ಲಿ ಹೋಗಿ ಮುಜುಗರ ಪಡುವುದಕ್ಕಿಂತ ತೂಕದ ಮಿತಿಯನ್ನು ಅರಿಯಿರಿ. ಅನಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗದಿರಿ.

* ಔಷಧಿ ಮರೆಯಬೇಡಿ: ಔಷಧಿಯನ್ನು ಹಾಕಿಕೊಳ್ಳಲೆಂದು ಚಿಕ್ಕ ಚೀಲ ಇಟ್ಟುಕೊಳ್ಳಿ. ವಾತಾವರಣ ಬದಲಾಗುವುದರಿಂದ ‌ಮಕ್ಕಳಿಗೆ ಅಗತ್ಯವಾದ ಔಷಧಿಗಳನ್ನು ವೈದ್ಯರ ಸಲಹೆ ಪಡೆದು ಕೊಂಡುಕೊಳ್ಳಿ. ಇದರಿಂದ ನೀವು ಹೋಗುವ ಊರಿನಲ್ಲಿ ಔಷಧಿ ಅಂಗಡಿಯನ್ನು ಹುಡುಕಿ ಅಲೆಯುವುದು ತಪ್ಪುತ್ತದೆ.

*ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಿ: ಲ್ಯಾಪ್‌ಟಾಪ್‌, ಚಾರ್ಜರ್‌, ಐಪಾಡ್‌, ಕ್ಯಾಮೆರಾ, ನಿಮ್ಮ ಮನೆಯ ವಿಳಾಸ... ಇಂತಹ ಅಗತ್ಯ ವಸ್ತುಗಳನ್ನು ಪ್ರಯಾಣ ಹೊರಡುವ ಹಿಂದಿನ ದಿನ ಬ್ಯಾಗಿನಲ್ಲಿ ಹಾಕಿಬಿಡಿ. ಮೊಬೈಲ್‌ ಸದಾ ಚಾರ್ಜ್‌ ಆಗಿರುವುದು ಅಗತ್ಯ. ಹಾಗಾಗಿ ಉತ್ತಮ ಗುಣಮಟ್ಟದ ಪವರ್‌ಬ್ಯಾಂಕ್‌ ಜೊತೆಗೆ ಇರಿಸಿಕೊಂಡಿರಿ.

*ವಾತಾವರಣ ತಿಳಿಯಿರಿ: ನೀವು ಹೋಗುತ್ತಿರುವ ಸ್ಥಳದ ವಾತಾವರಣ ಹೇಗಿದೆ ಎಂಬ ಅರಿವು ನಿಮಗಿರಬೇಕು. ಇದರಿಂದ ಎಂತಹ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಹೆಚ್ಚು ಚಳಿ ಇರುವ ಪ್ರದೇಶವಾದರೆ ಸ್ವೆಟರ್‌, ಶ್ರಗ್‌ ಅಗತ್ಯವಾಗಿ ಕೊಂಡೊಯ್ಯಿರಿ. ಬಿಸಿಲು ಪ್ರದೇಶವಾದರೆ ಕಾಟನ್ ಬಟ್ಟೆಗಳೇ ನಿಮ್ಮ ಆಯ್ಕೆಯಾಗಲಿ.

* ಸರಿಯಾಗಿ ಜೋಡಿಸಿಕೊಳ್ಳಿ: ಬ್ಯಾಗಿನಲ್ಲಿ ಎಲ್ಲವನ್ನೂ ಒಟ್ಟಾರೆಯಾಗಿ ತುರುಕುವುದರಿಂದ ಅಗತ್ಯ ವಸ್ತುವನ್ನು ತಕ್ಷಣಕ್ಕೆ ಹುಡುಕಲು ಕಷ್ಟವಾಗುತ್ತದೆ. ಹಾಗಾಗಿ ಬ್ಯಾಗಿನಲ್ಲಿ ಯಾವ್ಯಾವ ವಸ್ತುವನ್ನು ಎಲ್ಲೆಲ್ಲಿ ಇಡಬೇಕು ಎಂದು ವಿಭಾಗಿಸಿಕೊಳ್ಳಿ. ಇದರಿಂದ ವಸ್ತುಗಳನ್ನು ಹುಡುಕುವುದು ಸುಲಭ. ಹಾಗೆಯೇ ಬ್ಯಾಗಿಗೆ ಸೇಫ್ಟಿ ಲಾಕ್‌ ಕೂಡ ಇರಲಿ.

*ಕೊನೆಯದಾಗಿ ಟಿಕೆಟ್‌, ವೀಸಾ, ಪಾಸ್‌ಪೋರ್ಟ್‌, ಗುರುತಿನ ಚೀಟಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry