ದಲಿತ ಮಹಿಳೆಯರ ಮೇಲೆ ಹಲ್ಲೆ ಆರೋಪ: ಬಿಜೆಪಿ ಶಾಸಕರೊಬ್ಬರ ವಿರುದ್ಧ ಎಫ್‌ಐಆರ್

7

ದಲಿತ ಮಹಿಳೆಯರ ಮೇಲೆ ಹಲ್ಲೆ ಆರೋಪ: ಬಿಜೆಪಿ ಶಾಸಕರೊಬ್ಬರ ವಿರುದ್ಧ ಎಫ್‌ಐಆರ್

Published:
Updated:
ದಲಿತ ಮಹಿಳೆಯರ ಮೇಲೆ ಹಲ್ಲೆ ಆರೋಪ: ಬಿಜೆಪಿ ಶಾಸಕರೊಬ್ಬರ ವಿರುದ್ಧ ಎಫ್‌ಐಆರ್

ಡೆಹ್ರಾಡೂನ್: ಮೂವರು ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಹಾಗೂ ನಿಂದಿಸಿದ ಆರೋಪದಲ್ಲಿ ಉತ್ತರಾಖಂಡದ ರುದ್ರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜ್‌ಕುಮಾರ್ ತುಕ್ರಾಲ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಬಾಲಕ ಮತ್ತು ಬಾಲಕಿ ತಲೆಮರೆಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವಣ ವ್ಯಾಜ್ಯ ಬಗೆಹರಿಸಲು ಮಾರ್ಚ್ 9ರಂದು ಶಾಸಕರು ಸಂಧಾನ ಸಭೆ ನಡೆಸಿದ್ದರು. ಆ ಸಂದರ್ಭ ಬಾಲಕನ ತಾಯಿ ಮತ್ತು ಇಬ್ಬರು ಮಕ್ಕಳ ಮೇಲೆ ಶಾಸಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಾಲಕನ ತಂದೆ ಮಾಡಿರುವ ಆರೋಪದ ಆಧಾರದಲ್ಲಿ ರುದ್ರಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಮಧ್ಯೆ, ಶಾಸಕ ಹಲ್ಲೆ ಮಾಡಿದ್ದು ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರೋಪ ನಿರಾಕರಿಸಿದ ಶಾಸಕ: ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪವನ್ನು ರಾಜ್‌ಕುಮಾರ್ ತುಕ್ರಾಲ್ ಅಲ್ಲಗಳೆದಿದ್ದಾರೆ. ‘ಸಂಧಾನ ಸಭೆಯ ವೇಳೆ ಎರಡು ಕುಟುಂಬಗಳ ಸದಸ್ಯರು ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಮಧ್ಯಪ್ರವೇಶಿಸಿದೆ. ಅದುವೇ ವಿಡಿಯೊದಲ್ಲಿ ಕಾಣಿಸಿರುವುದು’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry