ವಿರಾಟ್‌ಗೆ ಅನುಷ್ಕಾ ಸಿಹಿಮುತ್ತು!

6

ವಿರಾಟ್‌ಗೆ ಅನುಷ್ಕಾ ಸಿಹಿಮುತ್ತು!

Published:
Updated:
ವಿರಾಟ್‌ಗೆ ಅನುಷ್ಕಾ ಸಿಹಿಮುತ್ತು!

ಇತ್ತೀಚೆಗಷ್ಟೇ ‘ಪರಿ’ ಸಿನಿಮಾದ ವಿವಾದದಿಂದ ಸುದ್ದಿಯಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಈ ಸಲ ಸುದ್ದಿಯಲ್ಲಿರುವುದು ವಿವಾದದ ಕಾರಣಕ್ಕಲ್ಲ. ಮುತ್ತಿನ ಕಾರಣಕ್ಕೆ!

ವಿಷಯ ಏನಪ್ಪಾ ಆಂದರೆ, ಬ್ಯುಸಿ ಶೆಡ್ಯೂಲ್ ನಡುವೆಯೂ ತುಸು ಬಿಡುವು ಮಾಡಿಕೊಂಡಿರುವ ಈ ಜೋಡಿ ಇತ್ತೀಚೆಗೆ ತೆಗೆದುಕೊಂಡ ಸೆಲ್ಫಿಯೊಂದು ಇನ್‌ಸ್ಟಾಗ್ರಾಂನಲ್ಲಿ ಭಾರಿ ಸದ್ದುಮಾಡುತ್ತಿದ್ದೆ. ಪ್ರೀತಿಯ ಇನಿಯನ ಕೆನ್ನೆಗೆ ಅನುಷ್ಕಾ ಮುತ್ತು ನೀಡುತ್ತಿರುವ ಈ ಚಿತ್ರಕ್ಕೆ ಏಳು ಲಕ್ಷಕ್ಕೂ ಲೈಕ್‌ಗಳು ಬಂದಿವೆ. ಇದೇ ಚಿತ್ರವನ್ನು ವಿರಾಟ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿರಾಟ್ ಹಂಚಿಕೊಂಡ ಚಿತ್ರಕ್ಕೆ 12ಲಕ್ಷ ಲೈಕ್‌ಗಳು ಬಂದಿವೆ.


 

 

A post shared by AnushkaSharma1588 (@anushkasharma) on


ಮದುವೆಗೆ ಮುನ್ನ, ಮದುವೆಯ ನಂತರ ಹೀಗೆ ಒಂದಿಲ್ಲೊಂದು ಸುದ್ದಿಯ ಕಾರಣಕ್ಕೆ ಸುದ್ದಿಯಾಗುತ್ತಿರುವ ಈ ಜೋಡಿ, ಸಮುದ್ರತೀರದಲ್ಲೊಂದು ಬೃಹತ್ ಬಂಗಲೆ ಖರೀದಿಸಿದೆಯಂತೆ. ಮುಳುಗುತ್ತಿರುವ ಸೂರ್ಯನನ್ನು ಮನೆಯ ಟೇರೆಸ್ ಮೇಲೆ ಕಣ್ತುಂಬಿಕೊಳ್ಳುತ್ತಿರುವ ಅನುಷ್ಕಾ ಚಿತ್ರ ನೆಟ್ಟಿಗರ ಮನಗೆದ್ದಿದ್ದರೆ, ಮನೆಯ ತೆರೆದ ಬಾಲ್ಕನಿಯಲ್ಲಿ ವಿರಾಟ್ ತೆಗೆದುಕೊಂಡಿದ್ದ ಸೆಲ್ಫಿಗೆ ವಿರಾಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ದೊರೆತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry