ಬಿಎಂಡಬ್ಲ್ಯು ಕಾರ್‌ ಮಾರುಕಟ್ಟೆಗೆ

7

ಬಿಎಂಡಬ್ಲ್ಯು ಕಾರ್‌ ಮಾರುಕಟ್ಟೆಗೆ

Published:
Updated:
ಬಿಎಂಡಬ್ಲ್ಯು ಕಾರ್‌ ಮಾರುಕಟ್ಟೆಗೆ

ಬೆಂಗಳೂರು: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ‘ಬಿಎಂಡಬ್ಲ್ಯು’ದ 6 ಸಿರೀಸ್ ಗ್ರ್ಯಾನ್ ಟುರಿಸ್ಮೊ ಸ್ಪೋರ್ಟ್ಸ ಲೈನ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.

ದೇಶೀಯವಾಗಿ ತಯಾರಿಸಿರುವ ಈ ಪೆಟ್ರೋಲ್‌ ಚಾಲಿತ ಕಾರ್‌ಗೆ ಬುಕಿಂಗ್‌ ಆರಂಭಗೊಂಡಿದೆ. ಇದರ ಎಕ್ಸ್‌ಷೋರೂಂ ಬೆಲೆ ₹58.90 ಲಕ್ಷ ಇದೆ. ಡೀಸೆಲ್‌ ಚಾಲಿತ ಕಾರ್‌ ಕೆಲ ತಿಂಗಳ ನಂತರ ಮಾರುಕಟ್ಟೆಗೆ ಬರಲಿದೆ. ದೆಹಲಿಯಲ್ಲಿ ನಡೆದಿದ್ದ ವಾಹನ ಮೇಳದಲ್ಲಿ ಈ ಕಾರನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. 250 ಎಚ್‌ಪಿ ಸಾಮರ್ಥ್ಯದ ಕಾರ್‌ 6.3 ಸೆಕೆಂಡುಗಳಲ್ಲಿ  ಪ್ರತಿ ಗಂಟೆಗೆ 0 ದಿಂದ 100 ಕಿ. ಮೀ ದೂರ ಕ್ರಮಿಸುವ ವೇಗ ಪಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry