ಮಾಜಿ ಸಚಿವರ ಬೆದರಿಕೆ ವಿಡಿಯೊ ವೈರಲ್‌

ಗುರುವಾರ , ಮಾರ್ಚ್ 21, 2019
25 °C

ಮಾಜಿ ಸಚಿವರ ಬೆದರಿಕೆ ವಿಡಿಯೊ ವೈರಲ್‌

Published:
Updated:
ಮಾಜಿ ಸಚಿವರ ಬೆದರಿಕೆ ವಿಡಿಯೊ ವೈರಲ್‌

ಪಣಜಿ: ದಕ್ಷಿಣ ಗೋವಾದ ಉಡ್ರೊಡಾ ಬೀಚ್‌ನಲ್ಲಿ ಗೋವಾ ಪ್ರವಾಸೋದ್ಯಮ ಮಾಜಿ ಸಚಿವ ಫ್ರಾನ್ಸಿಸೊ ಮಿಕ್ಕಿ ಪಚೆರೊ ಅವರು ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ಪಚೆರೊ ಅವರು ಬೀಚ್‌ನಲ್ಲಿ ಕಾರು ಚಲಾಯಿಸುತ್ತಿದ್ದರು. ಸ್ಥಳೀಯ ಕಾನೂನಿನ ಪ್ರಕಾರ, ಈ ಪ್ರದೇಶದಲ್ಲಿ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಇದನ್ನು ಪ್ರಶ್ನಿಸಿ

ದ್ದಕ್ಕೆ ನನ್ನನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದರು’ ಎಂದು ಮೆಲ್ರಾಯ್‌ ಡಿಸೋಜಾ ದೂರಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ ರುವ ಫ್ರಾನ್ಸಿಸೊ, ‘ಡಿಸೋಜಾ ಅವರೇ ನನ್ನನ್ನು ಜೀಪ್‌ನಲ್ಲಿ ಹಿಂಬಾಲಿಸಿದರು. ಈ ವೇಳೆ ವಾಹನ ನಿಲ್ಲಿಸಿ ಅವರನ್ನು ಪ್ರಶ್ನಿಸಿದೆ. ಈ ವೇಳೆ ಅವರೇ ನನ್ನನ್ನು ನಿಂದಿಸಿ, ಅಲ್ಲಿಂದ ಓಡಿಹೋದರು’ ಎಂದು ತಿಳಿಸಿದ್ದಾರೆ.

ಗೋವಾ ವಿಕಾಸ ಪಕ್ಷದಿಂದ ಗೆದ್ದು ಸಚಿವರಾಗಿದ್ದ ಫ್ರಾನ್ಸಿಸೊ ಅವರು 2015ರಲ್ಲಿ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry