ಪ್ಯಾಲೆಸ್ಟೀನ್: ಪ್ರಧಾನಿ ಬೆಂಗಾವಲು ಪಡೆ ಮೇಲೆ ದಾಳಿ

7

ಪ್ಯಾಲೆಸ್ಟೀನ್: ಪ್ರಧಾನಿ ಬೆಂಗಾವಲು ಪಡೆ ಮೇಲೆ ದಾಳಿ

Published:
Updated:

ಜಬಾಲಿಯ (ಗಾಜಾ ಪಟ್ಟಿ): ಪ್ಯಾಲೆಸ್ಟೀನ್ ಪ್ರಧಾನಿ ರಾಮಿ ಹಮ್ದಲ್ಲಾ ಅವರು ಗಾಜಾಕ್ಕೆ ಭೇಟಿ ನೀಡಿದ ವೇಳೆ ಅವರ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ.

‘ಇದೊಂದು ಕಗ್ಗೊಲೆಯ ಯತ್ನ’ ಎಂದಿರುವ ಫತಾಹ್ ಪಕ್ಷವು, ಘಟನೆಗೆ ಗಾಜಾದ ಹಮಾಸ್ ಉಗ್ರರು ಹೊಣೆ ಎಂದಿದೆ.

ಗಾಜಾದ ಉತ್ತರ ಭಾಗದಲ್ಲಿ ಸರ್ಕಾರಿ ಯೋಜನೆಯೊಂದರ ಉದ್ಘಾಟನೆಗಾಗಿ ಪ್ರಧಾನಿ ಬಂದಿದ್ದರು. ‌ಅವರಿಗೆ ಯಾವುದೇ ಅಪಾಯ ಆಗಿಲ್ಲ. ‘ದಾಳಿಗೆ ನಾವು ಹೆದರಿ ಕೂರುವುದಿಲ್ಲ. ಮತ್ತೆ ಗಾಜಾಕ್ಕೆ ಬರುತ್ತೇವೆ’‍ ಎಂದು ಹೇಳಿದ್ದಾರೆ.

ಬೆಂಗಾವಲು ಪಡೆಯ ಒಬ್ಬರಿಗೆ ಗಾಯವಾಗಿದ್ದು, ಮೂರು ವಾಹನಗಳಿಗೆ ಹಾನಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry