ಮೂರು ಸ್ಕೈವಾಕ್‌ಗಳ ಉದ್ಘಾಟನೆ

7
ಕಸ್ತೂರಬಾ ರಸ್ತೆ, ದೊಮ್ಮಲೂರು ಒಳವರ್ತುಲ ರಸ್ತೆ, ಎಚ್‌ಎಎಲ್‌ ರಸ್ತೆಯಲ್ಲಿ ನಿರ್ಮಾಣ

ಮೂರು ಸ್ಕೈವಾಕ್‌ಗಳ ಉದ್ಘಾಟನೆ

Published:
Updated:
ಮೂರು ಸ್ಕೈವಾಕ್‌ಗಳ ಉದ್ಘಾಟನೆ

ಬೆಂಗಳೂರು: ಪಾಲಿಕೆಯು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಮೂರು ಕಡೆಗಳಲ್ಲಿ ನಿರ್ಮಿಸಿರುವ ಸ್ಕೈವಾಕ್‌ಗಳನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಉದ್ಘಾಟಿಸಿದರು.

ಕಸ್ತೂರಬಾ ರಸ್ತೆಯ ಸರ್‌ ಎಂ.ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದ ಬಳಿ ನಿರ್ಮಿಸಿರುವ ಸ್ಕೈವಾಕ್‌ 32 ಮೀ. ಉದ್ದ, ತಲಾ 3 ಮೀ. ಅಗಲ ಹಾಗೂ ಎತ್ತರ ಹೊಂದಿದೆ. ಲಿಫ್ಟ್‌ ಅಳವಡಿಸಲಾಗಿದೆ. ಪ್ರತಿವರ್ಷ ₹5.1 ಲಕ್ಷ ನೆಲಬಾಡಿಗೆ ಹಾಗೂ ₹4 ಲಕ್ಷ ಜಾಹೀರಾತು ಶುಲ್ಕವನ್ನು ಖಾಸಗಿ ಸಂಸ್ಥೆಯು ಪಾಲಿಕೆಗೆ ಪಾವತಿಸಲಿದೆ.

ದೊಮ್ಮಲೂರು ಒಳವರ್ತುಲ ರಸ್ತೆಯ ಡೆಲ್‌ ಕಂಪನಿ ಸಿಗ್ನಲ್‌ ಬಳಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆ 27.20 ಮೀ. ಉದ್ದ, 3.50 ಮೀ. ಅಗಲ ಹಾಗೂ 3 ಮೀ. ಎತ್ತರವಿದೆ. ಲಿಫ್ಟ್‌ ಅಳವಡಿಸಿದ್ದು, ಒಮ್ಮೆ 8 ಮಂದಿಯನ್ನು ಹೊತ್ತೊಯ್ಯಬಲ್ಲದು. ಪ್ರತಿವರ್ಷ ₹10.80 ಲಕ್ಷ ನೆಲಬಾಡಿಗೆ ಹಾಗೂ ₹2.50 ಲಕ್ಷ ಜಾಹೀರಾತು ಶುಲ್ಕ ಪಾಲಿಕೆಗೆ ಬರಲಿದೆ.

ಎಚ್‌ಎಎಲ್‌ ರಸ್ತೆಯ ಶಾಂತಿಸಾಗರ್‌ ಹೋಟೆಲ್‌ ಬಳಿ ನಿರ್ಮಿಸಿರುವ ಮೇಲ್ಸೇತುವೆ 26.20 ಮೀ. ಉದ್ದ, 3.60 ಮೀ. ಅಗಲ ಹಾಗೂ 3 ಮೀ. ಎತ್ತರ ಹೊಂದಿದೆ. ಲಿಫ್ಟ್‌ ಅಳವಡಿಸಲಾಗಿದೆ. ಪ್ರತಿವರ್ಷ ₹7 ಲಕ್ಷ ನೆಲಬಾಡಿಗೆ ಹಾಗೂ ₹3.75 ಲಕ್ಷ ಜಾಹೀರಾತು ಶುಲ್ಕ ಪಾಲಿಕೆಗೆ ಪಾವತಿಸಲಿದೆ.

ನಗರದಲ್ಲಿ ಒಟ್ಟು 153 ಸ್ಕೈವಾಕ್‌ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 33 ಪೂರ್ಣಗೊಂಡಿವೆ. ಇನ್ನೂ 8 ಮುಗಿಯುವ ಹಂತದಲ್ಲಿವೆ. 49 ಪಾದಚಾರಿ ಮೇಲ್ಸೇತುವೆಗಳು ಪ್ರಾರಂಭಿಸುವ ಹಂತದಲ್ಲಿವೆ. ಇನ್ನೂ 36 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ಪಡೆಯಬೇಕಾಗಿದೆ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

**

ಅಂಕಿ–ಅಂಶ

₹1.50 ಕೋಟಿ: ಕಸ್ತೂರಬಾ ರಸ್ತೆಯಲ್ಲಿರುವ ಸ್ಕೈವಾಕ್‌ ವೆಚ್ಚ

₹1.50 ಕೋಟಿ: ದೊಮ್ಮಲೂರು ಒಳವರ್ತುಲ ರಸ್ತೆಯ ಡೆಲ್‌ ಕಂಪನಿ ಸಿಗ್ನಲ್‌ ಬಳಿ ಸ್ಕೈವಾಕ್‌ ವೆಚ್ಚ

₹1.35 ಕೋಟಿ: ಎಚ್‌ಎಎಲ್‌ ರಸ್ತೆಯ ಶಾಂತಿಸಾಗರ್‌ ಹೋಟೆಲ್‌ ಬಳಿ ಸ್ಕೈವಾಕ್‌ ವೆಚ್ಚ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry