ಟ್ವಿಟ್ವಾದ: ಗೋರಖ್‌ಪುರದಲ್ಲಿ ಸೋಲು, ಫೂಲ್‌ಪುರದಲ್ಲೂ ಸೋಲು

7

ಟ್ವಿಟ್ವಾದ: ಗೋರಖ್‌ಪುರದಲ್ಲಿ ಸೋಲು, ಫೂಲ್‌ಪುರದಲ್ಲೂ ಸೋಲು

Published:
Updated:
ಟ್ವಿಟ್ವಾದ: ಗೋರಖ್‌ಪುರದಲ್ಲಿ ಸೋಲು, ಫೂಲ್‌ಪುರದಲ್ಲೂ ಸೋಲು

ಗೋರಖ್‌ಪುರದಲ್ಲಿ ಸೋಲು, ಫೂಲ್‌ಪುರದಲ್ಲೂ ಸೋಲು... ಇನ್ನು ಯೋಗಿ ಆದಿತ್ಯನಾಥ ಅವರು ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳಿಗೆ ಸಲಹೆ ನೀಡುವುದನ್ನು ನಿಲ್ಲಿಸಬೇಕು. ಮೊದಲು ನಿಮ್ಮ ರಾಜ್ಯದಲ್ಲಿ ಆಡಳಿತ ನಡೆಸಿ. ನಂತರ ಬೇರೆ ರಾಜ್ಯಗಳ ಬಗ್ಗೆ ಮಾತನಾಡಿ.

–ಕೆ. ಚಂದ್ರಕುಮಾರ್‌ @kurup62ಈ ಚುನಾವಣಾ ಫಲಿತಾಂಶದಿಂದ ನಮ್ಮ ಆತ್ಮಸ್ಥೈರ್ಯ ಯಾಕೆ ಕುಗ್ಗಬೇಕು? ವಿರೋಧ ಪಕ್ಷಗಳು ಸಂಭ್ರಮಿಸಲಿ ಬಿಡಿ. 2019ರ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ. ಇತ್ತೀಚೆಗೆ ನೀವು ಈಶಾನ್ಯ ರಾಜ್ಯಗಳಲ್ಲಿ ಗೆದ್ದಿದ್ದೀರಿ. ಸರದಿಯಲ್ಲಿ ಕರ್ನಾಟಕ ಇದೆ. ವಿಶ್ವಾಸ ಕಳೆದುಕೊಳ್ಳಬೇಡಿ; ಆ ಹೊತ್ತಿಗೆ ಹಲವು ವಿಷಯಗಳು ನಿಮಗೆ ಅನುಕೂಲಕರವಾಗಲಿವೆ.

–ಮೇಜರ್‌ ಸುಬ್ರತ್‌ ಮಿಶ್ರಾ ಎಸ್‌.ಎಂ (ನಿವೃತ್ತ) @SubratSMSM

ವಿರೋಧ ಪಕ್ಷಗಳು ರೂಪಿಸುವ ಯೋಜನೆಯಲ್ಲಿ ಮಾಯಾವತಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂಬುದನ್ನು ಉತ್ತರ ಪ್ರದೇಶದ ಉಪಚುನಾವಣೆ ನೆನಪಿಸಿದೆ. ಕರ್ನಾಟಕದಲ್ಲಿ ದೇವೇಗೌಡರಿಗೆ ನೀಡಿರುವ ಬೆಂಬಲದ ಬಗ್ಗೆ ಅವರು ಪರಾಮರ್ಶೆ ನಡೆಸಲಿದ್ದಾರೆಯೇ?– ಯಾಕೆಂದರೆ ಈ ಮೈತ್ರಿಯು ಬಿಜೆಪಿ ವಿರೋಧಿ ಮತಗಳನ್ನು ಒಡೆದು ಬಿಜೆಪಿಗೇ ಅನುಕೂಲ ಕಲ್ಪಿಸಲಿದೆ. 2019ರ ಚುನಾವಣೆಯಲ್ಲಿ ಮಾಯಾವತಿ ‘ಕಿಂಗ್‌/ಕ್ವೀನ್‌ ಮೇಕರ್‌’ ಆಗಿಯೇ ಉಳಿಯಲಿದ್ದಾರೆ. ಅವರು ದೊಡ್ಡ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಾಧ್ಯತೆ ಇದೆ.

-ಬರ್ಖಾ ದತ್‌ @BDUTT

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry