ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಪ್ರೀತ್‌ಗೆ ಮೊದಲ ಪ್ರಶಸ್ತಿ ಕನಸು

Last Updated 14 ಮಾರ್ಚ್ 2018, 20:49 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಫೈನಲ್‌ಗೆ ಸಜ್ಜಾಗುತ್ತಿರುವ ಬಿಎಫ್‌ಸಿ, ಲೀಗ್‌ಗೆ ಪ್ರವೇಶಿಸಿದ ಮೊದಲ ವರ್ಷದಲ್ಲೇ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ.

ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ತಂಡ ಪ್ರಶಸ್ತಿ ಗೆದ್ದರೆ ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್ ಸಂಧು ಹೆಚ್ಚು ಸಂಭ್ರಮಪಡಲಿದ್ದಾರೆ. ಯುರೋಪ್‌ನಲ್ಲಿ ಆಡಿ ತಾಯ್ನಾಡಿಗೆ ಮರಳಿರುವ ಸಂಧುಗೆ ಈ ಫುಟ್‌ಬಾಲ್ ಋತು ಸ್ಮರಣೀಯವಾಗಿದೆ. ಐಎಸ್‌ಎಲ್‌ ನಲ್ಲಿ ಬಿಎಫ್‌ಸಿ ಪರ ಆಡಲು ಆರಂಭಿಸಿದ ನಂತರ ಅವರ ವೃತ್ತಿ ಬದುಕಿನ ಚಿತ್ರಣವೇ ಬದಲಾಗಿದೆ. ಮಹತ್ವದ ಲೀಗ್‌ ಒಂದರಲ್ಲಿ ಒಟ್ಟು 18 ಪಂದ್ಯಗಳನ್ನು ಆಡಿರುವ ಹೊಸ ಅನುಭವ ಅವರಿಗೆ ಸಿಕ್ಕಿದೆ.

ಈಸ್ಟ್ ಬೆಂಗಾಲ್‌ನಲ್ಲಿ ರನ್ನರ್ ಅಪ್‌ ಸಂಭ್ರಮ: ಸಂಧು ಈ ಹಿಂದೆ ಐ ಲೀಗ್‌ನಲ್ಲಿ ಈಸ್ಟ್ ಬೆಂಗಾಲ್ ಪರ ಆಡಿದ್ದರು. ಅವರು ಗೋಲ್ ಕೀಪರ್ ಆಗಿದ್ದಾಗ ತಂಡ ಎರಡು ಬಾರಿ ರನ್ನರ್ ಅಪ್ ಆಗಿತ್ತು.

‘ಪ್ರಶಸ್ತಿ ಗೆದ್ದ ತಂಡವೊಂದರ ಸದಸ್ಯನಾದ ಅನುಭವ ನನಗಿಲ್ಲ. ಮೊದಲ ಬಾರಿ ಆ ರೋಮಾಂಚನಕ್ಕಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT