ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದರೆ ನೇಕಾರರಿಗೆ ಉದ್ಯೋಗ

ಗುಳೇದಗುಡ್ಡ: ನೇಕಾರರ ಪರ್ವ ಬೃಹತ್ ಸಮಾವೇಶದಲ್ಲಿ ಕುಮಾರಸ್ವಾಮಿ ಭರವಸೆ
Last Updated 15 ಮಾರ್ಚ್ 2018, 11:16 IST
ಅಕ್ಷರ ಗಾತ್ರ

ಗುಳೇದಗುಡ್ಡ: ‘ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸಾಕಷ್ಟು ಅವಕಾಶ ಮಾಡಿ ಕೊಟ್ಟಿದ್ದರಿ. ಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರ ಮಾಡಲು ಒಂದು ಅವಕಾಶ ಕೊಡಿ. ಈ ರಾಜ್ಯದ ನೇಕಾರರು, ರೈತರು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗಗಳಿಗೆ ಕೆಲಸ ಕೊಡುವ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುತ್ತೇನೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಅವರು ಮಂಗಳವಾರ ಬಾಲಕರ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಡೆದ ಬಾದಾಮಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ವತಿಯಿಂದ ನಡೆದ ನೇಕಾರರ ಪರ್ವ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ರಾಜ್ಯದ ಅಭಿವೃದ್ಧಿಗೆ ವಿನೂತನ ಚಿಂತನೆ ಹೊಂದಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಕೆ ಹಾಗೂ ನೇಕಾರರು ತಯಾರಿಸುವ ಬಟ್ಟೆಗೆ ಉತ್ತಮ ಬೆಲೆ ದೊರೆಯುವಂತೆ ಮಾರುಕಟ್ಟೆ ಸಿಗುವಂತೆ ಮಾಡುವೆ’ ಎಂದು ಹೇಳಿದರು.

‘ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಅವರಿಗೆ ₹ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. 70 ವರ್ಷ ಮೇಲ್ಪಟ್ಟ ಹಿರಿಯರು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಪ್ರತಿ ತಿಂಗಳ ₹ 5 ಸಾವಿರ ಮಾಸಾಶನ ನೀಡಲಾಗುವುದು. ಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿ ಹಾಗೂ ಕಾಂಗ್ರೆಸ್ ಕೊಡುವ ಅಮಿಷಗಳಿಗೆ ಬಲಿಯಾಗಿ ನಿಮ್ಮ ಮತಗಳನ್ನು ಮಾರಿಕೊಳ್ಳದೇ ಜೆಡಿಎಸ್ ಬೆಂಬಲಿಸಿ ಬಾದಾಮಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಅವರಿಗೆ ಮತ ಕೊಟ್ಟು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬಂಡೆಪ್ಪ ಕಾಶೆಂಪುರ, ಬಹುಜನ ಸಮಾಜ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಸಿ.ಕಾಂಬಳೆ, ಮತಕ್ಷೇತ್ರದ ಅಭ್ಯರ್ಥಿ ಹನಮಂತ ಮಾವಿನಮರದ ಮಾತನಾಡಿದರು.

ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಹುಬ್ಬಳ್ಳಿ ವೀರಬಿಕ್ಷಾವರ್ತಿ ಮಠದ ನೀಲಕಂಠ ಸ್ವಾಮೀಜಿ, ಪದ್ಮಸಾಲಿ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ, ನೀರಲಕೇರಿ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಾಜ್ಯ ನೇಕಾರ ಘಟಕದ ಕಾರ್ಯಾ ಧ್ಯಕ್ಷ ಚಂದ್ರಕಾಂತ ಶೇಖಾ, ರಾಜ್ಯ ಘಟಕದ ಅಧ್ಯಕ್ಷ ಸಿ.ನಾಗರಾಜ, ಸಯ್ಯದ್ ಮೋಮಿನ್ ಅಲ್ತಾಫ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭುವನೇಶ್ವರಿ ಹಾದಿಮನಿ, ಬಿ.ಎನ್.ಬಸವರಾಜ ಪಾದಯಾತ್ರಿ, ಮಹೇಶ ಬಿಜಾಪುರ, ಅನ್ವರಖಾನ್ ಪಠಾಣ, ಉಮೇಶ ಹುನಗುಂದ, ಮುತ್ತಣ್ಣ ದೇವರಮನಿ, ಮುತ್ತಣ್ಣ ಶೀಲವಂತ, ಅರ್ಜುನಪ್ಪ ಪಾಟೀಲ, ಸೌದಾಗರ, ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಣ್ಣ ಹಿರಾಳ, ಮಹಾದೇವಪ್ಪ ಕುರಿ, ಲಕ್ಷ್ಮಣ್ಣ ಹಾಲನ್ನವರ, ಈಶ್ವರ ಕಂಠಿ, ಆರ್.ಎಂ.ರಂಜಣಗಿ, ಮಧುಸೂದನ ತಿವಾರಿ, ಸಂಗಪ್ಪ ಹಡಪದ, ರಮೇಶ ದೊಡಮನಿ, ಅಜೀಜ್ ಮುಲ್ಲಾ, ಬಾಲು ಹುನಗುಂಡಿ ಇದ್ದರು. ಶ್ರೀಕಾಂತ ಹುನಗುಂದ ಸ್ವಾಗತಿಸಿದರು. ಲೋಹಿತ ಪೋರೆ ನಿರೂಪಿಸಿದರು.

ಸಂವಾದ ಕಾರ್ಯಕ್ರಮ: ಭಂಡಾರಿ ಕಾಲೇಜಿನ ಸಭಾ ಭವನದಲ್ಲಿ ನೇಕಾ ರರೊಂದಿಗೆ ಕುಮಾರ ಸ್ವಾಮಿ ಸಂವಾದ ನಡೆಸಿದರು. ಸಮಾಜದ ಮುಖಂಡರಾದ ಕೆರೂರಿನ ಲಿಂಗರಾಜ ಕೊಣ್ಣೂರ, ಮಾಜಿ ಶಾಸಕ ಎಂ.ವಿ.ಬನ್ನಿ, ಮಂಜುನಾಥ ಪಾಟೀಲ, ಬೆಳ ಗಾವಿ ಶ್ರೀನಿವಾಸ ತಾಳುವಕರ, ಆನಂದ ದೊಡಮನಿ, ವೈ.ಜಿ.ಬ್ಯಾಡಗಿ, ಈಶ್ವರ ಎಣ್ಣಿ, ಓಂ. ಮಲಜಿ, ಅಮಾತೆಪ್ಪ ಕೊಪ್ಪಳ, ಭುವನೇಶ್ವರಿ ಹಾದಿಮನಿ, ನೇಕಾರ ಸಮುದಾಯಗಳ ಕಾರ್ಯದರ್ಶಿ ಮಹೇಶ ಶೇಬಿನಕಟ್ಟಿ, ಪ್ರಕಾಶ ಗಾಯದ, ಸಚಿನ್ ತೊಗರಿ, ಶಿವಪ್ಪ ಕಲಬುರ್ಗಿ, ಗಿರಿಜಾ ಕಲ್ಯಾಣಿ, ಶ್ರೀನಿವಾಸ ಮಲಜಿ ಇದ್ದರು.

ಹುಚ್ಚೇಶ್ವರ ಮಠಕ್ಕೆ ಭೇಟಿ: ‘ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರಿಯ ಪಕ್ಷದ ಮುಖಂಡರು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಜೆಡಿಎಸ್ ಪಕ್ಷವು ಹಾಗಲ್ಲ. ರೈತರ, ನೇಕಾರರ ಹಾಗೂ ಹಳ್ಳಿಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಅವರು ಬುಧವಾರ ಕೋಟೆಕಲ್ಲ ಗ್ರಾಮದ ಹೊಳೆ ಹುಚ್ಚೇಶ್ವರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹನಮಂತ ಮಾವಿನಮರದ, ಸಂಗಪ್ಪ ಹಡಪದ, ಈರಪ್ಪ ಅಬಕಾರಿ, ಅಬ್ದುಲ್ ರೆಹಮಾನ್‌ ಯಳ್ಳಿಗುತ್ತಿ, ಶಾಂತವೀರಯ್ಯ ಹುಚ್ಚೇಶ್ವರಮಠ, ಸಿಖಂದರ ಖಾಜಿ, ಜಾಹಿಂಗರ ಕಮಾ ನಗರ, ಡಿ.ಕೆ.ಕುಲಕರ್ಣಿ, ಯಮನೂರಪ್ಪ ಅರಮನಿ ಇದ್ದರು.

‘ನೇಕಾರರಿಗೆ ಕೌಶಲ ವಿವಿ ಸ್ಥಾಪನೆ’
ಗುಳೇದಗುಡ್ಡ:
‘ನೇಕಾರರು ತಯಾರಿಸುವ ಬಟ್ಟೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನೇಕಾರ ವೃತ್ತಿಗೆ ಬೆಲೆ ಸಿಗುವಂತೆ ಮಾರುಕಟ್ಟೆ ನಿರ್ಮಾಣ ಮಾಡುವುದು. ರಾಜ್ಯದ ನೇಕಾರರಿಗೆ ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಉದ್ದೇಶ ಹೊಂದಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಅವರು ಮಂಗಳವಾರ ಭಂಡಾರಿ ಕಾಲೇಜಿನ ಸಭಾ ಭವನದಲ್ಲಿ ನೇಕಾರರೊಂದಿಗೆ ಸಂವಾದದಲ್ಲಿ ಮಾತನಾಡಿ, ‘ರಾಜ್ಯದಲ್ಲಿ ರೈತರು ಎಷ್ಟು ಮುಖ್ಯವೋ, ಅಷ್ಟೇ ನೇಕಾರರು ಮುಖ್ಯವಾಗಿದ್ದಾರೆ. ವಿವಿಧ ರೀತಿಯ ಕೌಶಲ ಹೊಂದಿದ ನೇಕಾರರಿಗೆ ತರಬೇತಿ ನೀಡುವುದು ಅಗತ್ಯವಾಗಿದೆ. ಗುಡಿ ಕೈಗಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡು ವುದು. ಸರ್ಕಾರದಿಂದ ಕೈಮಗ್ಗಗಳ ಬಟ್ಟೆ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇಲ್ಲಿ ಕಮಿಷನ್‌ಗೆ ಅವಕಾಶ ಮಾಡದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪ್ರತಿ ತಿಂಗಳು ರೈತರು ಮತ್ತು ನೇಕಾರರನ್ನು ಒಂದು ದಿನ ವಿಧಾನಸಭೆಗೆ ಅವರನ್ನು ಕರೆಯಿಸಿ. ವೃತ್ತಿಯನ್ನು ಅಭಿವೃದ್ಧಿ ಪಡೆಸುವುದು ಮತ್ತು ಅದರಿಂದ ಲಾಭ ಪಡೆಯುವ ಬಗ್ಗೆ ಸಲಹೆ ಪಡೆಯಲಾಗುವುದು. ನಾನು ಅಧಿಕಾರಿಗಳ ಸಲಹೆ ಪಡೆಯುವುದಿಲ್ಲ. ನಿಮ್ಮ ಸಲಹೆ ಪಡೆಯುತ್ತೇನೆ. ನಿಮ್ಮ ನೋವುಗಳಿಗೆ ಯಾವತ್ತು ಸ್ಪಂದಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT