ದುಪ್ಪಟ್ಟು ಆಗಲಿದೆ ಉದ್ಯೋಗಿಗಳ ಪಿಂಚಣಿ ಯೋಜನೆಯ ಕನಿಷ್ಠ ಪಿಂಚಣಿ ಮೊತ್ತ

7

ದುಪ್ಪಟ್ಟು ಆಗಲಿದೆ ಉದ್ಯೋಗಿಗಳ ಪಿಂಚಣಿ ಯೋಜನೆಯ ಕನಿಷ್ಠ ಪಿಂಚಣಿ ಮೊತ್ತ

Published:
Updated:
ದುಪ್ಪಟ್ಟು ಆಗಲಿದೆ ಉದ್ಯೋಗಿಗಳ ಪಿಂಚಣಿ ಯೋಜನೆಯ ಕನಿಷ್ಠ ಪಿಂಚಣಿ ಮೊತ್ತ

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ)ಯ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್)ಯಡಿಯಲ್ಲಿನ ಪಿಂಚಣಿ ಮೊತ್ತವು ದುಪ್ಪಟ್ಟಾಗಲಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸದ್ಯ ₹1000 ಮೊತ್ತದ ಪಿಂಚಣಿಯನ್ನು ₹2000ಗೆ ಏರಿಕೆ ಮಾಡಲು ಸರ್ಕಾರ ಚಿಂತಿಸಿದೆ. ಸಾರ್ವತ್ರಿಕ ಚುನಾವಣೆ ಸಮಿಪಿಸುತ್ತಿರುವ ಹೊತ್ತಲ್ಲಿ ಈ ರೀತಿ ಪಿಂಚಣಿ ಏರಿಕೆ ಮಾಡಿದರೆ 4 ದಶಲಕ್ಷ ಜನರು ಇದರ ಫಲನುಭವಿಸಲಿದ್ದಾರೆ. ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 3,000 ಕೋಟಿ ವೆಚ್ಚ ತಗುಲಲಿದೆ ಎಂದು ಸರ್ಕಾರಿ ಅಧಿಕಾರಿ ಹೇಳಿದ್ದಾರೆ.

ಇಪಿಎಸ್ -95 ಯೋಜನೆಗಳಡಿಯಲ್ಲಿ ಸದ್ಯ 60 ಲಕ್ಷ ಜನರಿದ್ದಾರೆ.ಇದರಲ್ಲಿ 40 ಲಕ್ಷ ಜನರಿಗೆ ₹1,500 ರೂಪಾಯಿಗಿಂತ ಕಡಿಮೆ ಪಿಂಚಣಿ ಸಿಗುತ್ತಿದೆ. ಆದಾಗ್ಯೂ, ದೈನಂದಿನ ಅಗತ್ಯಗಳಿಗೆ ಇಷ್ಟೊಂದು ದುಡ್ಡು ಸಾಕಾಗುವುದಿಲ್ಲ. ಹಾಗಾಗಿ ಕನಿಷ್ಠ ಪಿಂಚಣಿಯನ್ನು ₹1,000ದಿಂದ ಏರಿಕೆ ಮಾಡಬೇಕು ಎಂದು ಸಂಸದೀಯ ಸಮಿತಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry