ಭಿಕ್ಷುಕಿಗೆ ಎಚ್‌ಡಿಕೆ ಸಹಾಯಹಸ್ತ

7

ಭಿಕ್ಷುಕಿಗೆ ಎಚ್‌ಡಿಕೆ ಸಹಾಯಹಸ್ತ

Published:
Updated:

ಕುಮಟಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಮಾದನಗೇರಿಯ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರಿಗೆ ಎಚ್.ಡಿ.ಕುಮಾರಸ್ವಾಮಿ ₹10 ಸಾವಿರ ಧನಸಹಾಯ ಮಾಡಿದರು.

ಗೋಕರ್ಣದಲ್ಲಿ ‍ಪಕ್ಷದಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಮುಗಿಸಿ ಕುಮಟಾಕ್ಕೆ ವಾಪಸಾಗುತ್ತಿದ್ದಾಗ ಸುಮಾರು 30 ವರ್ಷದ ಮಹಿಳೆ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದುದನ್ನು ಗಮನಿಸಿ, ತಕ್ಷಣ ಮಹಿಳೆಯ ಬಗ್ಗೆ ವಿಚಾರಿಸಿ ಆಕೆಗೆ ಹಣ ನೀಡಿದರು.

ಸಾಗರದಲ್ಲಿರುವ ಜೆಡಿಎಸ್ ಮುಖಂಡರೊಬ್ಬರಿಗೆ ದೂರವಾಣಿ ಕರೆ ಮಾಡಿ, ಮಹಿಳೆಯ ಜೀವನಕ್ಕೆ ಗೂಡಂಗಡಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಮಹಿಳೆಗೆ ಇನ್ನು ಮುಂದೆ ಭಿಕ್ಷೆ ಬೇಡದೆ ಸ್ವಾಭಿಮಾನದ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry