ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಗ್ರಾಮ: ‘ಉಡುಗೊರೆ’ಗೆ ಬೆಂಕಿ

Last Updated 16 ಮಾರ್ಚ್ 2018, 18:33 IST
ಅಕ್ಷರ ಗಾತ್ರ

ಹಿರಿಯೂರು: ಯುಗಾದಿ ಹಬ್ಬದ ಕಾರಣ ಹೇಳಿ ತಾಲ್ಲೂಕಿನ ಪಿಟ್ಲಾಲಿ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರಿಗೆ ನೀಡಲು ಶಾಸಕ ಡಿ.ಸುಧಾಕರ್ ಅವರು ಕಳುಹಿಸಿದ್ದ ಸೀರೆ ಹಾಗೂ ಕ್ಯಾಲೆಂಡರ್‌ಗಳನ್ನು ಹಂಚಲು ಬಿಡದೇ ಅವನ್ನು ರಾಶಿ ಹಾಕಿ, ಬೆಂಕಿಹಚ್ಚಿ ಸುಡಲಾಗಿದೆ.

‘ವಾಹನವೊಂದರಲ್ಲಿ ಶಾಸಕರ ಬೆಂಬಲಿಗರು ಸೀರೆಯ ಕವರ್ ಹಾಗೂ ಕ್ಯಾಲೆಂಡರ್‌ಗಳನ್ನು ಹಳ್ಳಿಯ ಬಸ್ ನಿಲ್ದಾಣಕ್ಕೆ ತಂದಾಗ ಗ್ರಾಮದ ಬಹಳಷ್ಟು ಜನ ವಿರೋಧಿಸಿದರು. ಕೆಲವರು ‘ಹಂಚಲಿ ಬಿಡಿ, ನಿಮಗೆ ಬೇಕಿಲ್ಲ ಎಂದರೆ ತೆಗೆದುಕೊಳ್ಳಬೇಡಿ’ ಎಂದರು. ಇದರಿಂದ ಗ್ರಾಮದಲ್ಲಿ ಮಾತಿನ ಚಕಮಕಿ ನಡೆಯಿತು. ಕೊನೆಗೆ ವಾಹನದಲ್ಲಿದ್ದ ಉಡುಗೊರೆಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿದರು’ ಎಂದು ಪ್ರತ್ಯಕ್ಷದ
ರ್ಶಿಗಳು ತಿಳಿಸಿದ್ದಾರೆ.

‘ಮತ ಕೇಳಿಲ್ಲ’: ‘ಹಿಂದಿನಿಂದಲೂ ಹಬ್ಬಗಳ ಸಂದರ್ಭದಲ್ಲಿ ಕೊಡುಗೆ ಕೊಡಲಾಗುತ್ತಿದೆ. ಯುಗಾದಿ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಲಾಗುತ್ತಿದೆ. ಈಗ ಚುನಾವಣೆಯ ನೀತಿಸಂಹಿತೆಯೂ ಇಲ್ಲ. ನಮ್ಮವರು ಕೊಡುಗೆ ಕೊಡುವಾಗ ಮತವನ್ನೇನೂ ಕೇಳುತ್ತಿಲ್ಲ. ರಾಜಕೀಯಕ್ಕಾಗಿ ವಿರೋಧಿಗಳು ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಸುಧಾಕರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT