‘ಮೊಬೈಲ್ ಬಳಕೆಯಿಂದ ತಪ್ಪು ದಾರಿ’

7

‘ಮೊಬೈಲ್ ಬಳಕೆಯಿಂದ ತಪ್ಪು ದಾರಿ’

Published:
Updated:

ನಾಲತವಾಡ: ಅರ್ಧದಷ್ಟು ಹೆಣ್ಣು ಮಕ್ಕಳು ತಾವು ಉಪಯೋಗಿಸುವ ಮೊಬೈಲ್ ಮೂಲಕವೆ ತಪ್ಪು ದಾರಿತುಳಿಯುತ್ತಿದ್ದು, ಪಾಲಕರು ಆದಷ್ಟು ಮೊಬೈಲ್‌ ಮಕ್ಕಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ಪಿಎಸ್‌ಐ ಗೋವಿಂದಗೌಡ ಪಾಟೀಲ ಹೇಳಿದರು.

ಪಟ್ಟಣದ ವಿರೇಶ್ವರ ಪ್ರೌಢಶಾಲೆಯಲ್ಲಿ ಮುದ್ದೇಬಿಹಾಳ ಪೊಲೀಸ್‌ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಹೆಣ್ಣು ಮಕ್ಕಳ ರಕ್ಷಣೆಯ ಹಕ್ಕು ಹಾಗೂ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಲಿಕೆಯ ಹಂತದಲ್ಲಿ ಮೊಬೈಲ್‌ ಬಳಕೆ ಅವಶ್ಯವಿರುವುದಿಲ್ಲ. ವಿನಾಕಾರಣ ಒಂಟಿ ಓಡಾಟ ಮಾಡಬಾರದು. ಎಲ್ಲಿಯಾದರೂ ತೆರಳಬೇಕಾದರೆ ಪಾಲಕರ ಅಪ್ಪಣೆ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಎಲ್.ಎಸ್.ನಾಯಕ, ಎನ್.ಎ.ಗದ್ದನಕೇರಿ, ಜಿ.ಬಿ.ಲಿಂಗರಡ್ಡಿ, ಸಿ.ಎಚ್.ದಳವಾಯಿ, ಆರ್.ಸಿ.ಗೂಳಿ, ಎಸ್.ಬಿ.ನ್ಯಾಮಣ್ಣನವರ, ಎ.ವೈ.ಸಾಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry