ಪರಸ್ಪರ ಮಾಲೆ ಹಾಕಿಕೊಂಡ ಶಿವಣ್ಣ, ಬಸವರಾಜ್

7

ಪರಸ್ಪರ ಮಾಲೆ ಹಾಕಿಕೊಂಡ ಶಿವಣ್ಣ, ಬಸವರಾಜ್

Published:
Updated:

ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯು ಶುಕ್ರವಾರ ನಡೆಸಿದ ಸಭೆಯಲ್ಲಿ ಸಮಾಜ ಬಾಂಧವರ ಮನವಿ ಮೇರೆಗೆ ಸಮಾಜದ ಮುಖಂಡರಾದ ಜಿ.ಎಸ್. ಬಸವರಾಜ್ ಮತ್ತು ಸೊಗಡು ಶಿವಣ್ಣ ಅವರು ಪರಸ್ಪರ ಮಾಲೆ ಹಾಕಿಕೊಳ್ಳುವ ಮೂಲಕ ಇಬ್ಬರೂ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಅಧ್ಯಕ್ಷತೆಯಲ್ಲಿ ಜಗದ್ಗುರು ರೇಣುಕಾಚಾರ್ಯರ, ಬಸವೇಶ್ವರ, ಸಿದ್ದರಾಮೇಶ್ವರ ಜಂಟಿ ಜಯಂತ್ಯುತ್ಸವ ಆಚರಣೆ ಕುರಿತು ಸಭೆ ನಡೆಯಿತು.

ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಅಧ್ಯಕ್ಷರು ತಿಳಿಸಿದರು.

ವೀರಶೈವ ಬ್ಯಾಂಕಿನ ಅಧ್ಯಕ್ಷ ಟಿ.ಎಂ.ಯೋಗೀಶ್, ಶಿವಶ್ರೀ ಬ್ಯಾಂಕಿನ ಅಧ್ಯಕ್ಷ ಭಸ್ಮಾಂಗಿ ರುದ್ರಯ್ಯ, ಜಿ.ಎಂ.ಎ ಅಸೋಸಿಯೇಷನ್ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ಟಿ.ಜಿ.ಎಂ.ಸಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಎ.ಎಸ್.ರುದ್ರಕುಮಾರ್ ಆರಾಧ್ಯ, ಸಹ ಕಾರ್ಯದರ್ಶಿ ಅತ್ತಿ ರೇಣುಕಾನಂದ, ನಿರ್ದೇಶಕ ಟಿ.ಆರ್.ಯೋಗೀಶ್, ಡಿ.ಆರ್. ಮಲ್ಲೇಶಯ್ಯ, ಕೆ.ಜಿ.ಶಿವಕುಮಾರ್, ಟಿ.ಎನ್.ರುದ್ರೇಶ್, ಕೆ.ಎಸ್.ಮಂಜುನಾಥ್, ಶಿವರುದ್ರಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry