ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

7

ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

Published:
Updated:
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

1. ಚಿತ್ರ-1ರಲ್ಲಿರುವ ದೃಶ್ಯವನ್ನು ಎಚ್ಚರಿಕೆಯಿಂದ ಗಮನಿಸಿ ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಾ?

ಅ. ಇದು ಯಾವ ಭೂ ಖಂಡದ ದೃಶ್ಯ?

ಬ. ನಿಮ್ಮ ತೀರ್ಮಾನಕ್ಕೆ ಆಧಾರ ಏನು?

ಕ. ಈ ಚಿತ್ರದಲ್ಲಿ ಕಾಣುತ್ತಿರುವ ವೃಕ್ಷಗಳ ಹೆಸರೇನು?

ಡ. ಇಲ್ಲಿರುವ ಆನೆಗಳ ವೈಜ್ಞಾನಿಕ ಹೆಸರು?

2. ದಟ್ಟ ಕಾನನದ ನಡುವೆ ಬಾಗಿ ಪ್ರವಹಿಸುತ್ತಿರುವ ನದಿಯೊಂದರ ದೃಶ್ಯ ಚಿತ್ರ-2ರಲ್ಲಿದೆ. ಪೃಥ್ವಿಯ ಕೆಲವು ಅತ್ಯಂತ ಪರಿಚಿತ ಪ್ರಧಾನ ನದಿಗಳನ್ನು ಈ ಕೆಳಗೆ ಹೆಸರಿಸಿದೆ. ಈ ಪಟ್ಟಿಯಲ್ಲಿರುವ ನದಿಗಳು ಯಾವ ಯಾವ ಭೂ ಖಂಡಗಳಲ್ಲಿ ಪ್ರವಹಿಸುತ್ತಿವೆ ಗೊತ್ತೇ?

ಅ. ಜಾಂಬೇಜೀ ಬ. ವೋಲ್ಗಾ

ಕ. ಮೇಕಾಂಗ್  ಡ. ನೈಲ್

ಇ. ದನುಬೇ ಈ. ಕೊಲಂಬಿಯಾ

ಉ. ಓರಿನೋಕೋ  ಟ. ಗಂಗಾ

ಇ. ಡಾರ್ಲಿಂಗ್  ಈ. ಅಮೆಜಾನ್

3. ಪೃಥ್ವಿಯ ‘ಅತ್ಯಂತ ಎತ್ತರದ ಜಲಪಾತ’ ಎಂಬ ವಿಶ್ವ ದಾಖಲೆಯನ್ನು ಹೊಂದಿರುವ ಜಲಪಾತದ ಒಂದು ದೃಶ್ಯ ಚಿತ್ರ-3ರಲ್ಲಿದೆ.

ಅ. ಈ ಜಲಪಾತ ಯಾವುದು?

ಬ. ಈ ಜಲಪಾತ ಯಾವ ಭೂ ಖಂಡದ ಯಾವ ರಾಷ್ಟ್ರದಲ್ಲಿದೆ?

ಕ. ಈ ಜಲಪಾತದ ಎತ್ತರ ಇವುಗಳಲ್ಲಿ ಯಾವ ಅಳತೆಗೆ ಸಮೀಪ?

(450 ಮೀಟರ್; 640 ಮೀಟರ್; 980 ಮೀಟರ್; 1260 ಮೀಟರ್; 1500 ಮೀಟರ್)

4. ಉತ್ತರ ಅಮೆರಿಕ ಖಂಡದ ಅತ್ಯಂತ ಎತ್ತರದ ಪರ್ವತದ ಒಂದು ದೃಶ್ಯ ಚಿತ್ರ-4ರಲ್ಲಿದೆ. ಈ ಪರ್ವತ ಯಾವುದು?

ಅ. ಸಿಯೆರಾ ನಿವ್ಯಾಡಾ →ಬ. ದೇನಾಲಿ ಪರ್ವತ

ಕ. ರೈನಿಯೆರ್ ಪರ್ವತ →ಡ. ವ್ಹಿಟ್ನೀ ಪರ್ವತ

5. ಲಕ್ಷಾಂತರ ವರ್ಷಗಳ ಅವಧಿಯಲ್ಲಿ, ನೈಸರ್ಗಿಕ ಶಿಥಿಲಕಾರಕಗಳಿಂದ ಕಡೆಯಲ್ಪಟ್ಟಿರುವ, ಕೊರೆಯಲ್ಪಟ್ಟಿರುವ ಒಂದು ವಿಸ್ಮಯಕರ ‘ಬಂಡೆ ಕಮಾನು’ ಚಿತ್ರ-5ರಲ್ಲಿದೆ. ಈ ಬಗೆಯ ಬಂಡೆ ಕಮಾನುಗಳು ಯಾವ ಶಿಲೆಗಳಲ್ಲಿ ಮೈದಳೆಯುತ್ತವೆ?

ಅ. ಜೇಡಿ ಶಿಲೆ →ಬ. ಸ್ಲೇಟ್

ಕ. ಬಸಾಲ್ಟ್ ಶಿಲೆ →ಡ. ಮರಳು ಶಿಲೆ

ಇ. ಗ್ರಾನೈಟ್ ಶಿಲೆ →ಈ. ಸುಣ್ಣ ಶಿಲೆ

6. ಹವಳ ಲೋಕಗಳನ್ನು ನಿರ್ವರ್ಣಗೊಳಿಸಿ ಹಾಳುಗೆಡಹುವ ಅಪಾಯಕಾರಿ ವಿದ್ಯಮಾನವೊಂದರ ಪರಿಣಾಮದ ದೃಶ್ಯ ಚಿತ್ರ-6ರಲ್ಲಿದೆ.

ಅ. ಈ ವಿದ್ಯಮಾನದ ಹೆಸರೇನು?

ಬ. ಧರೆಯ ಅತ್ಯಂತ ವಿಸ್ತಾರವಾದ ಹವಳ ಸಾಮ್ರಾಜ್ಯ ಯಾವುದು?

ಕ. ಅದು ಯಾವ ಸಾಗರ ಪ್ರದೇಶದಲ್ಲಿದೆ?

7. ಕಡಲ ನಡುವೆ ತಲೆಯೆತ್ತಿ ನಿಂತಿರುವ ಒಂದು ಸುಂದರ ದ್ವೀಪ ಚಿತ್ರ-7ರಲ್ಲಿದೆ. ಈ ಕೆಳಗೆ ಪಟ್ಟಿ ಮಾಡಿರುವ ಸುಪ್ರಸಿದ್ಧ ದ್ವೀಪಗಳಲ್ಲಿ ಯಾವುದು ಧರೆಯ ಅತ್ಯಂತ ವಿಶಾಲ ದ್ವೀಪ? ಯಾವುದು ದ್ವೀಪ ಅಲ್ಲ?

ಅ. ನ್ಯೂ ಗಿನಿ ಬ. ಬಫಿನ್ ದ್ವೀಪ

ಕ. ಗ್ರೀನ್ ಲ್ಯಾಂಡ್  ಡ. ಬೋರ್ನಿಯೋ

ಇ. ಆಸ್ಟ್ರೇಲಿಯಾ ಈ. ಮಡಗಾಸ್ಕರ್

8. ಒಂಟೆಗಳ ಸಾಲೊಂದು ನಡೆದು ಸಾಗುತ್ತಿರುವ ಬಿಸಿ ಮರುಭೂಮಿಯೊಂದರ ದೃಶ್ಯ ಚಿತ್ರ-8ರಲ್ಲಿದೆ. ಪೃಥ್ವಿಯ ಯಾವ ಭೂ ಖಂಡದಲ್ಲಿ ಕಿಂಚಿತ್ತೂ ಮರುಭೂಮಿ ಪ್ರದೇಶ ಇಲ್ಲ?

ಅ. ದಕ್ಷಿಣ ಅಮೆರಿಕ  ಬ. ಆಸ್ಟ್ರೇಲಿಯಾ

ಕ. ಏಷ್ಯಾ ಡ. ಯೂರೋಪ್

ಇ. ಉತ್ತರ ಅಮೆರಿಕ ಈ. ಅಂಟಾರ್ಕ್ಟಿಕಾ

9. ಅಡವಿಗಳನ್ನು ಧ್ವಂಸ ಮಾಡುವ ಉಗ್ರ, ಪ್ರಬಲ ನೈಸರ್ಗಿಕ ವಿದ್ಯಮಾನಗಳು ಹಲವಾರಿವೆ. ಅಂತಹದೊಂದು ವಿದ್ಯಮಾನದ ಪರಿಣಾಮದ ದೃಶ್ಯ ಚಿತ್ರ-9ರಲ್ಲಿದೆ. ಆ ವಿದ್ಯಮಾನ ಯಾವುದೆಂದು ಈ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?

ಅ. ಬರಗಾಲ ಬ. ಕೀಟಗಳ ಹಾವಳಿ

ಕ. ಕಾಡು ಕಿಚ್ಚು  ಡ. ಚಂಡ ಮಾರುತ

. ಆಮ್ಲ ಮಳೆ  ಈ. ಭೂ ತಾಪದ ಹೆಚ್ಚಳ

10. ಚಿತ್ರ-10ರಲ್ಲಿರುವ ನೈಸರ್ಗಿಕ ಪರಿಸರವನ್ನು ಗಮನಿಸಿ. ಈ ಜೀವಾವಾರ ಕೆಳಗಿನ ಯಾವ ಬಗೆಗೆ ಸೇರಿದೆ ಗುರುತಿಸಿ:

ಅ. ಹುಲ್ಲು ಬಯಲು ಬ. ಪರ್ವತ ಜೀವಾವಾರ

ಕ. ತಂಡ್ರಾ ಪ್ರದೇಶ ಡ. ಟೈಗಾ ಪ್ರದೇಶ

ಇ. ಅರಣ್ಯ ಜೀವಾವಾರ

11. ಆಫ್ರಿಕಾದ ‘ರಿಫ್ಟ್ ವ್ಯಾಲಿ’ ಪ್ರದೇಶದಲ್ಲಿರುವ ಶುದ್ಧ ನೀರಿನ ಹಲವಾರು ಸರೋವರಗಳಲ್ಲಿ ಐದು ಪ್ರಧಾನ ಸರೋವರಗಳನ್ನು ಚಿತ್ರ-11ರಲ್ಲಿ ಗುರುತಿಸಿ ತೋರಿಸಲಾಗಿದೆ. ಪೃಥ್ವಿಯ ಕೆಲ ಅತ್ಯಂತ ವಿಖ್ಯಾತ ಮಹಾ ಸರೋವರಗಳ ಈ ಪಟ್ಟಿಯಲ್ಲಿ ಆಫ್ರಿಕಾದ ಸರೋವರಗಳು ಯಾವುವು?

ಅ. ಬೈಕಲ್ ಸರೋವರ

ಬ. ತಾಂಗನ್ಯೀಕಾ ಸರೋವರ

ಕ. ವಿಕ್ಟೋರಿಯಾ ಸರೋವರ

ಡ. ಸುಪೀರಿಯರ್ ಸರೋವರ

ಇ. ಆಲ್ಬರ್ಟ್ ಸರೋವರ

ಈ. ತುರ್ಕಾನಾ ಸರೋವರ

ಉ. ಹ್ಯೂರಾನ್ ಸರೋವರ

12. ನಮ್ಮ ಪೃಥ್ವಿಯ ಒಂದು ಇಡೀ ಭೂ ಖಂಡ ಚಿತ್ರ-12ರಲ್ಲಿದೆ.

ಅ. ಈ ಭೂಖಂಡ ಯಾವುದು?

ಬ. ಈ ಭೂಖಂಡದ ಶ್ವೇತ ವರ್ಣಕ್ಕೆ ಕಾರಣ ಏನು?

ಕ. ಇದಕ್ಕೆ ಅತ್ಯಂತ ಸನಿಹದ ನೆರೆಯ ಭೂ ಖಂಡ ಯಾವುದು?

13. ಧರೆಯ ಕೆಲ ಪ್ರದೇಶಗಳಲ್ಲಷ್ಟೇ ಕಾಣ ಸಿಗುವ ನೈಸರ್ಗಿಕ ‘ಕುದಿ ನೀರಿನ ಕಾರಂಜಿ’ಗಳಲ್ಲೊಂದು ಚಿತ್ರ-13ರಲ್ಲಿದೆ. ಪೃಥ್ವಿಯ ಯಾವ ರಾಷ್ಟ್ರದಲ್ಲಿ ಕುದಿ ನೀರಿನ ಕಾರಂಜಿಗಳು ಗರಿಷ್ಠ ಸಂಖ್ಯೆಯಲ್ಲಿವೆ ಗೊತ್ತೇ?

ಅ. ಯು.ಎಸ್.ಎ ಬ. ಐಸ್ ಲ್ಯಾಂಡ್

ಕ. ನ್ಯೂಜಿಲ್ಯಾಂಡ್  ಡ. ಜಪಾನ್

ಉತ್ತರಗಳು

1. ಅ. ಆಫ್ರಿಕಾ; ಬ. ಆಫ್ರಿಕನ್ ಆನೆ ಹಿಂಡು; ಕ. ಅಕೇಶಿಯಾ; ಡ.ಲೋಕ್ಸೊಡೋಂಟಾ ಆಫ್ರಿಕಾನಾ.

2. ಏಷ್ಯಾ - ಕ ಮತ್ತು ಟ; ಆಫ್ರಿಕಾ - ಅ ಮತ್ತು ಡ; ಯೂರೋಪ್ - ಇ; ಆಸ್ಟ್ರೇಲಿಯಾ - ಇ; ಉತ್ತರ ಅಮೆರಿಕ - ಈ; ದಕ್ಷಿಣ ಅಮೆರಿಕ - ಉ ಮತ್ತು ಈ

3. ಅ. ಏಂಜಲ್ ಜಲಪಾತ; ಬ. ದಕ್ಷಿಣ ಅಮೆರಿಕದ ವೆನಿಜೂಯೆಲಾ; ಕ. 980 ಮೀಟರ್

4. ಬ. ದೇನಾಲಿ

5. ಡ ಮತ್ತು ಈ

6. ಅ. ಕಾರಲ್ ಬ್ಲೀಚಿಂಗ್; ಬ. ದಿ ಗ್ರೇಟ್ ಬ್ಯಾರಿಯರ್ ರೀಫ್; ಕ. ಶಾಂತ ಸಾಗರ

7. ಅತ್ಯಂತ ವಿಶಾಲ ದ್ವೀಪ - ಗ್ರೀನ್ ಲ್ಯಾಂಡ್; ದ್ವೀಪ ಅಲ್ಲದ್ದು - ಆಸ್ಟ್ರೇಲಿಯಾ

8. ಡ. ಯೂರೋಪ್

9. ಇ. ಆಮ್ಲ ಮಳೆ

10. ಬ. ಪರ್ವತ ಜೀವಾವಾರ

11. ಬ, ಕ, ಇ ಮತ್ತು ಈ

12. ಅ. ಅಂಟಾರ್ಕ್ಟಿಕಾ; ಬ. ಶಾಶ್ವತ ಹಿಮಾಚ್ಛಾದನೆ; ಕ. ದಕ್ಷಿಣ ಅಮೆರಿಕ

13. ಅ. ಯು.ಎಸ್.ಎ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry