ಪರಿಶೀಲನೆ, ಸಂಸ್ಕರಣೆ ಬಳಿಕವೇ ರದ್ದಾದ ನೋಟುಗಳ ವಿಲೇವಾರಿ: ಆರ್‌ಬಿಐ ಸ್ಪಷ್ಟನೆ

7

ಪರಿಶೀಲನೆ, ಸಂಸ್ಕರಣೆ ಬಳಿಕವೇ ರದ್ದಾದ ನೋಟುಗಳ ವಿಲೇವಾರಿ: ಆರ್‌ಬಿಐ ಸ್ಪಷ್ಟನೆ

Published:
Updated:
ಪರಿಶೀಲನೆ, ಸಂಸ್ಕರಣೆ ಬಳಿಕವೇ ರದ್ದಾದ ನೋಟುಗಳ ವಿಲೇವಾರಿ: ಆರ್‌ಬಿಐ ಸ್ಪಷ್ಟನೆ

ನವದೆಹಲಿ: ರದ್ದು ಪಡಿಸಲಾಗಿರುವ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ವಿಲೇವಾರಿ ಮಾಡುವ ಮೊದಲು ಪ್ರಾಮಾಣಿಕವಾಗಿ ಲೆಕ್ಕ ಹಾಕಲಾಗಿದ್ದು, ಸಂಸ್ಕರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ಮಾಹಿತಿ ಪ್ರಕಾರ 2017 ಜೂನ್ 30ರವರೆಗೆ ಬ್ಯಾಂಕ್‌ಗಳಿಗೆ ವಾಪಸ್ಸಾಗಿರುವ ರದ್ದಾದ ನೋಟುಗಳ ಮೌಲ್ಯ ₹15.28 ಲಕ್ಷ ಕೋಟಿ.

‘ನೋಟು ಪರಿಶೀಲನೆ ಹಾಗೂ ಸಂಸ್ಕರಣೆಯ ಅತ್ಯಾಧುನಿಕ ವಿಧಾನಗಳ ಮೂಲಕ ರದ್ದಾದ ನೋಟುಗಳನ್ನು ಎಣಿಸಲಾಗಿದೆ. ಆರ್‌ಬಿಐನ ಹಲವು ಶಾಖೆಗಳಲ್ಲಿ ಅಳವಡಿಸಲಾಗಿರುವ ನೋಟು ಚೂರುಮಾಡುವ ಹಾಗೂ ಕರಗಿಸುವ ವ್ಯವಸ್ಥೆ ಮೂಲಕವೇ ನೋಟು ವಿಲೇವಾರಿ ಮಾಡಲಾಗಿದೆ’ ಆರ್‌ಟಿಐ ಪ್ರಶ್ನೆಗೆ ಆರ್‌ಬಿಐ ಉತ್ತರಿಸಿದೆ.

ಜತೆಗೆ ಸಂಸ್ಕರಿಸಿದ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ ಎಂದೂ ಸ್ಪಷ್ಟನೆ ನೀಡಿದೆ.

ರದ್ದಾದ ನೋಟುಗಳ ಪರಿಶೀಲನೆ ಹಾಗೂ ಸಂಸ್ಕರಣೆಗಾಗಿ ಆರ್‌ಬಿಐ ವಿವಿಧ ಶಾಖೆಗಳಲ್ಲಿ ಅಳವಡಿಸಿರುವ ಕನಿಷ್ಟ 59 ಅತ್ಯಾಧುನಿಕ ಯಂತ್ರಗಳು ಕಾರ್ಯನಿರ್ವಹಿಸಿವೆ.

ಕೇಂದ್ರ ಸರ್ಕಾರ 2016ರ ನವೆಂಬರ್‌ 8ರಂದು ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿತ್ತು.

ಆ ಸಂದರ್ಭದಲ್ಲಿ ₹15.44 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಆ ಪೈಕಿ ಶೇ 99ರಷ್ಟು (₹15.28 ಲಕ್ಷ ಕೋಟಿ ಮೌಲ್ಯದ ನೋಟುಗಳು) ಬ್ಯಾಂಕುಗಳಿಗೆ ವಾಪಸ್‌ ಬಂದಿವೆ ಎಂದು ಆರ್‌ಬಿಐ 2017ರ ಆಗಸ್ಟ್‌ನಲ್ಲಿ ಹೇಳಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry