’ಸೌದಿ ಮಹಿಳೆಯರು ತಲೆಗವಸು ಧರಿಸುವ ಅಗತ್ಯವಿಲ್ಲ’

7

’ಸೌದಿ ಮಹಿಳೆಯರು ತಲೆಗವಸು ಧರಿಸುವ ಅಗತ್ಯವಿಲ್ಲ’

Published:
Updated:

ರಿಯಾದ್‌: ಸೌದಿ ಅರೇಬಿಯಾದ ಮಹಿಳೆಯರು ತಲೆಗವಸು ಅಥವಾ ಕಪ್ಪು ‘ಅಬಯಾ’ ಧರಿಸುವ ಅಗತ್ಯವಿಲ್ಲ ಎಂದು ಯುವ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ತಿಳಿಸಿದ್ದಾರೆ.

ಆದರೆ, ಮಹಿಳೆಯರು ಧರಿಸುವ ಬಟ್ಟೆಗಳು ಗೌರವಯುತವಾಗಿರಬೇಕು ಮತ್ತು ಸಭ್ಯತೆಯಿಂದ ಕೂಡಿರಬೇಕು ಎಂದು ಹೇಳಿದ್ದಾರೆ.

ಉದ್ದನೇಯ, ಸಡಿಲವಾಗಿರುವ ಕಪ್ಪು ಬಟ್ಟೆಗೆ ಅಬಯಾ ಎಂದು ಕರೆಯಲಾಗುತ್ತದೆ. ಮೊಹಮ್ಮದ್‌ ಅವರ ಹೇಳಿಕೆ ಮುಸ್ಲಿಂ ರಾಷ್ಟ್ರ ಆಧುನಿಕತೆಗೆ ತೆರೆದುಕೊಳ್ಳುವ ಮುಕ್ತ ಮನಸ್ಸು ಹೊಂದಿರುವುದನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry