ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಐದನೇ ಹಂಗಾಮಿ ಕುಲಪತಿ

Last Updated 19 ಮಾರ್ಚ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಐದನೇ ಹಂಗಾಮಿ ಕುಲಪತಿಯಾಗಿ ಗಣಿತ ವಿಭಾಗದ ಡೀನ್‌ ಶಿವಕುಮಾರ್‌ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಇರುವವರು ನಿವೃತ್ತರಾದಾಗ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ ಪೂರ್ಣಾವಧಿ ಕುಲಪತಿ ನೇಮಕವಾಗುವವರೆಗೆ ವಿಶ್ವವಿದ್ಯಾಲಯದ ಹಿರಿಯ ಡೀನ್‌ ಹಂಗಾಮಿ ಕುಲಪತಿಯಾಗಿ ನೇಮಕವಾಗುತ್ತಾರೆ.

ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಸುದೇಶ್‌ ಅವರ ಡೀನ್‌ ಅವಧಿ ಶನಿವಾರಕ್ಕೆ ಮುಕ್ತಾಯವಾಗಿದೆ. ಹಾಗಾಗಿ ಹಿರಿಯ ಡೀನ್‌ ಆಗಿದ್ದ ಶಿವಕುಮಾರ್ ಅವರು ಹಂಗಾಮಿ ಕುಲಪತಿಯಾಗಿ ನೇಮಕವಾಗಿದ್ದಾರೆ. ಇವರ ಡೀನ್‌ ಅವಧಿ 2018ರ ಜುಲೈ 7ಕ್ಕೆ ಮುಗಿಯಲಿದೆ.

ನಿಲ್ಲದ ಹಂಗಾಮಿ ಕುಲಪತಿಗಳ ನೇಮಕ: ಪ್ರೊ.ಬಿ.ತಿಮ್ಮೇಗೌಡ ಅವರ ಅವಧಿ ಫೆಬ್ರುವರಿ 6ಕ್ಕೆ ಮುಗಿದಿತ್ತು. 13 ತಿಂಗಳ ಅವಧಿಯಲ್ಲಿ ನಾಲ್ಕು ಹಂಗಾಮಿ ಕುಲಪತಿಗಳನ್ನು ವಿಶ್ವವಿದ್ಯಾಲಯ ಕಂಡಿದೆ. ಈಗ ಐದನೆಯವರ ಅವಧಿ ಪ್ರಾರಂಭವಾಗಿದೆ.

ಸಮೂಹ ಸಂವಹನ ವಿಭಾಗದ ಡಾ. ಜಗದೀಶ್‌ ಪ್ರಕಾಶ್‌ ಅವರು ಒಂದು ತಿಂಗಳು ಹಂಗಾಮಿ ಕುಲಪತಿಯಾಗಿದ್ದರು. ವಾಣಿಜ್ಯ ವಿಭಾಗದ ಡೀನ್‌ ಆಗಿದ್ದ ಡಾ.ಎಂ. ಮುನಿರಾಜು ಅವರು 4 ತಿಂಗಳು ಹಾಗೂ ಸುದೇಶ್‌ ಅವರು ಮೂರು ತಿಂಗಳು ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

‘ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಿಂದಾಗಿ ಕಾಯಂ ಕುಲಪತಿ ನೇಮಕ ಪ್ರಕ್ರಿಯೆ ನನೆಗುದ್ದಿಗೆ ಬಿದ್ದಿದೆ. ಹಂಗಾಮಿ ಕುಲಪತಿಗಳಿರುವ ವಿಶ್ವವಿದ್ಯಾಲಯಗಳಲ್ಲಿ ಆದಷ್ಟು ಬೇಗ ಕುಲ‍ಪತಿಗಳ ನೇಮಕ ಮಾಡುತ್ತೇನೆ ಎಂದು ಸಚಿವರು ಹತ್ತು ತಿಂಗಳಿನಿಂದ ಹೇಳುತ್ತಲೇ ಇದ್ದಾರೆ. ನೇಮಕಾತಿ ಮಾತ್ರ ಆಗಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹೆಸರು ಶಿಫಾರಸು ಮಾಡಲು ಡಾ.ಎಸ್‌.ಆರ್‌.ನಿರಂಜನ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT