ಪ್ರಿಯಾ ಅಲ್ಲ ಸಾರಾ

7

ಪ್ರಿಯಾ ಅಲ್ಲ ಸಾರಾ

Published:
Updated:
ಪ್ರಿಯಾ ಅಲ್ಲ ಸಾರಾ

ದಿನ ಬೆಳಗಾಗುವುದರೊಳಗೆ ಜಗತ್ಪ್ರಸಿದ್ಧಿ ಪಡೆದಿದ್ದ ಮಲೆಯಾಳಿ ಕುಟ್ಟಿ ಪ್ರಿಯಾ ವಾರಿಯರ್‌ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಇಲ್ಲಿದೆ. ‘ಸಿಂಬಾ’ ಸಿನಿಮಾದ ನಾಯಕಿಯಾಗುವ ಅವಕಾಶ ಪ್ರಿಯಾ ಕೈತಪ್ಪಿದ್ದು, ಸೈಫ್‌ ಅಲಿ ಖಾನ್‌ ಮಗಳು ಸುಂದರಿ ಸಾರಾ ಅಲಿ ಖಾನ್‌ ಪಾಲಾಗಿದೆ.

ಸಿನಿಮಾಕ್ಕಿಂತ ಜಿಮ್‌ ಸೂಟ್‌ ಮತ್ತು ಇತರ ಉಡುಪುಗಳ ಮೂಲಕವೇ ಹಾಟ್‌ ಬೆಡಗಿ ಎಂಬ ಹಣೆಪಟ್ಟಿ ಗಿಟ್ಟಿಸಿಕೊಂಡು ಎಲ್ಲರ ಕಣ್ಮಣಿ ಎನಿಸಿ ಕೊಂಡಿರುವ ಸಾರಾ, ರೋಹಿತ್‌ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಪದ್ಮಾವತ್‌’ ಸಿನಿಮಾದ ಯಶಸ್ಸಿನಿಂದ ತಾರಾ ವರ್ಚಸ್ಸು ಹೆಚ್ಚಿಸಿಕೊಂಡಿರುವ ರಣವೀರ್‌ ಸಿಂಗ್‌ ಈ ಚಿತ್ರದ ನಾಯಕ ಎಂಬುದು ಗಮನಾರ್ಹ.

ಮತ್ತೊಂದು ಮೂಲದ ಪ್ರಕಾರ, ‘ಸಿಂಬಾ’ದ ಚಿತ್ರತಂಡಕ್ಕಿರುವ ತಾರಾ ವರ್ಚಸ್ಸಿಗೆ ಮನಸೋತಿರುವ ಸಾರಾ, ಈಗಾಗಲೇ ತೊಡಗಿಸಿಕೊಂಡಿರುವ ತಮ್ಮ ಮೊದಲ ಚಿತ್ರ ‘ಕೇದಾರನಾಥ’ಕ್ಕೆ ಕೈಕೊಟ್ಟು ಹೊರಬರಲಿದ್ದಾರಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry