ಫೋನ್‌ಪೇ ಜತೆ ಸ್ವಿಗ್ಗಿ ಒಪ್ಪಂದ

7

ಫೋನ್‌ಪೇ ಜತೆ ಸ್ವಿಗ್ಗಿ ಒಪ್ಪಂದ

Published:
Updated:

ನವದೆಹಲಿ: ಹೋಟೆಲ್‌ಗಳಿಂದ ತಿಂಡಿ ಮತ್ತು ಆಹಾರ ಪದಾರ್ಥಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಅಂತರ್ಜಾಲ ತಾಣ ಸ್ವಿಗ್ಗಿ, ಮೊಬೈಲ್‌ ವಾಲೆಟ್‌ ಫೋನ್‌ ಪೇ ಜತೆ ಒಪ್ಪಂದ ಮಾಡಿಕೊಂಡಿದೆ.

ಹಣ ಪಾವತಿಸಲು ಗ್ರಾಹಕರಿಗೆ ಹೊಸ ಆಯ್ಕೆಗಳನ್ನು ಒದಗಿಸಲು ಈ ಒಪ್ಪಂದ ನೆರವಾಗಲಿದೆ. ಗ್ರಾಹಕರು ತ್ವರಿತ, ಸುರಕ್ಷಿತ ಮತ್ತು ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸಬಹುದಾಗಿದೆ. ಸ್ವಿಗ್ಗಿ ಆ್ಯಪ್‌ನಲ್ಲಿ ಈಗ ಗ್ರಾಹಕರು ಫೋನ್‌ ಪೇ ವಾಲೆಟ್‌, ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಸೌಲಭ್ಯಗಳನ್ನು ಬಳಸಿ ಹಣ ಪಾವತಿಸಬಹುದಾಗಿದೆ.

ಇ–ಕಾಮರ್ಸ್‌ ತಾಣಗಳೂ ಸೇರಿದಂತೆ ಸದ್ಯಕ್ಕೆ 60 ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಫೋನ್‌ಪೇ ಬಳಕೆಯಾಗುತ್ತಿದೆ. ಮೇಕ್‌ ಮೈ ಟ್ರಿಪ್‌, ಪಿವಿಆರ್‌, ಮ್ಯಾಕ್‌ಡೋನಾಲ್ಡ್‌, ಕ್ಲಿಯರ್‌ ಟ್ರಿಪ್‌, ಮಿಂತ್ರಾ, ಕೆಎಫ್‌ಸಿ, ಅಪೊಲೊ ಫಾರ್ಮಸಿ, ಬರಿಸ್ಟಾ ಸೇರಿದಂತೆ ಬಹುತೇಕ ಮಳಿಗೆಗಳಲ್ಲಿ ಈ ವಾಲೆಟ್‌ ಬಳಸಲಾಗುತ್ತಿದೆ.

‘ಬಿಸಿ ಬಿಸಿ ತಿಂಡಿ ಮತ್ತು ಆಹಾರ ಪದಾರ್ಥಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಆನ್‌ಲೈನ್‌ ತಾಣವಾಗಿರುವ ಸ್ವಿಗ್ಗಿ ಅವಲಂಬಿಸುವ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ’ ಎಂದು ಫೋನ್‌ಪೇ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪ್ರದೀಪ್‌ ಡಿ. ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry