ಶುದ್ಧ ನೀರಿಗಾಗಿ ಪ್ರತಿ ದಿನ ಈಜುವ ಇಂಡೊನೇಷ್ಯಾ ಮಹಿಳೆ

7

ಶುದ್ಧ ನೀರಿಗಾಗಿ ಪ್ರತಿ ದಿನ ಈಜುವ ಇಂಡೊನೇಷ್ಯಾ ಮಹಿಳೆ

Published:
Updated:
ಶುದ್ಧ ನೀರಿಗಾಗಿ ಪ್ರತಿ ದಿನ ಈಜುವ ಇಂಡೊನೇಷ್ಯಾ ಮಹಿಳೆ

ಮಕಸ್ಸಾರ್‌ (ಎಎಫ್‌ಪಿ): ಶುದ್ಧ ಕುಡಿಯುವ ನೀರಿಗಾಗಿ ಇಂಡೊನೇಷ್ಯಾದ ಮಹಿಳೆಯೊಬ್ಬರು ಪ್ರತಿ ದಿನ ನದಿಯಲ್ಲಿ ನಾಲ್ಕು ಕಿಲೊ ಮೀಟರ್‌ ಈಜುವ ಸಾಹಸ ಮಾಡುತ್ತಿದ್ದಾರೆ.

ಸುಲಾವೇಸಿ ದ್ವೀಪದ ಮಹಿಳೆ ಮಾಮ ಹಸ್ರಿಯಾ (46) ಎನ್ನುವವರು ತಮ್ಮ ಸಮುದಾಯಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದಕ್ಕಾಗಿ ಸುಮಾರು 200 ಖಾಲಿ ಕ್ಯಾನ್‌ಗಳನ್ನು ಬೆನ್ನಿಗೆ ಕಟ್ಟಿಕೊಳ್ಳುವ ಹಸ್ರಿಯಾ, ನದಿ ದಡದಲ್ಲಿರುವ ಬಾವಿಗಳಿಂದ ಶುದ್ಧ ಕುಡಿಯುವ ನೀರು ತರುತ್ತಾರೆ. ಈ ಮೂಲಕ ದ್ವೀಪದ ತಿನಾಮ್‌ಬಂಗ್‌ ಜಿಲ್ಲೆಯ 5,800 ಕುಟುಂಬಗಳ ನೀರಿನ ದಾಹ ನೀಗಿಸುತ್ತಿದ್ದಾರೆ. ಅವರ ಈ ಕೆಲಸಕ್ಕೆ ಗ್ರಾಮದ ಮತ್ತೊಬ್ಬ ಮಹಿಳೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಹಸ್ರಿಯಾ ಅವರಿಗೆ ₹455 ದೊರೆಯುತ್ತದೆ.

‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಕೊರತೆ ಇದ್ದು, ಕುಡಿಯಲು ಮತ್ತು ಅಡುಗೆಗಾಗಿ ನದಿ ದಾಟಿ ನೀರು ತರುವುದು ಅನಿವಾರ್ಯ. ಗ್ರಾಮದಲ್ಲಿ ಸಿಗುವ ನೀರನ್ನು ಸ್ನಾನ ಮತ್ತು ಬಟ್ಟೆ ತೊಳೆಯಲು ಮಾತ್ರ ಬಳಸುತ್ತೇವೆ’ ಎಂದು ಹಸ್ರಿಯಾ ತಿಳಿಸಿದ್ದಾರೆ.

‘ಇಂಡೊನೇಷ್ಯಾದ ಇತರೆ ಭಾಗಗಳಲ್ಲಿಯೂ ಜನರು ಶುದ್ಧ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry