ಗುಡಿಸಲಿಗೆ ಬೆಂಕಿ: ಬಾಲಕಿ ಸಾವು

7

ಗುಡಿಸಲಿಗೆ ಬೆಂಕಿ: ಬಾಲಕಿ ಸಾವು

Published:
Updated:

ಮುಳಗುಂದ (ಗದಗ ಜಿಲ್ಲೆ): ಸಮೀಪದ ನೀಲಗುಂದ ಗ್ರಾಮದ ಹೊಲದಲ್ಲಿ ಗುರುವಾರ ಗುಡಿಸಲಿಗೆ ಬೆಂಕಿ ತಗುಲಿ, ಏಳು ವರ್ಷದ ರೇಣುಕಾ ಶರಣಪ್ಪ ಚಿಂಚಲಿ ಸುಟ್ಟು ಕರಕಲಾಗಿದ್ದಾಳೆ.

‘ಕೊಪ್ಪಳ ಜಿಲ್ಲೆ ಮತ್ತೂರ ಗ್ರಾಮದ ಬಾಲಕಿ ರೇಣುಕಾ ಹಾಗೂ ಆಕೆಯ ಅಣ್ಣ ನಿಂಗರಡ್ಡಿ, ತಾಯಿಯ (ಲಕ್ಷ್ಮಿ) ತವರು ಮನೆ ನೀಲಗುಂದದ ಅಜ್ಜ– ಅಜ್ಜಿ ಮನೆಗೆ ಬಂದಿದ್ದರು. ಅಜ್ಜ– ಅಜ್ಜಿ ಜತೆ ಬಾಲಕ, ಬಾಲಕಿ ಹೊಲಕ್ಕೆ ತೆರಳಿದ್ದರು. ಹೊಲದಲ್ಲಿದ್ದ ಗುಡಿಸಲಿನಲ್ಲಿ ಆಟ ಆಡುವಾಗ ಬಾಲಕ ನಿಂಗರಡ್ಡಿ ಆಕಸ್ಮಿಕವಾಗಿ ಬೆಂಕಿಕಡ್ಡಿ ಗೀರಿದ್ದಾನೆ. ಬೆಂಕಿಯ ಕಿಡಿ ಆಕಸ್ಮಿಕವಾಗಿ ಗುಡಿಸಲಿಗೆ ತಗುಲಿದೆ. ಆಗ ಬಾಲಕ ಗುಡಿಸಲಿನಿಂದ ಹೊರಕ್ಕೆ ಓಡಿ ಬಂದರೆ, ಬಾಲಕಿ ತನಗೇನೂ ಆಗುವುದಿಲ್ಲ ಎಂದು ಗುಡಿಸಲಿನಲ್ಲಿದ್ದ ಪ್ಲಾಸ್ಟಿಕ್ ತಾಡಪತ್ರಿ ಹೊದ್ದು ಕೂತಿದ್ದಾಳೆ. ಗುಡಿಸಲಿಗೆ ಪೂರ್ಣ ಬೆಂಕಿ ತಾಗಿದಾಗ ಉರಿಯುತ್ತಿರುವ ಗುಡಿಸಲು ಬಾಲಕಿ ಮೇಲೆ ಬಿದ್ದು, ಅವಘಡ ನಡೆದಿದೆ. ಈ ಸಂದರ್ಭದಲ್ಲಿ ಅಜ್ಜ– ಅಜ್ಜಿ ಹೊಲದ ಕೆಲಸದಲ್ಲಿ ನಿರತರಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಾಯಿ ಲಕ್ಷ್ಮಿ ಮುಳಗುಂದ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry