ನೆಲ ಒರೆಸುವ ಸಾಧನ

7

ನೆಲ ಒರೆಸುವ ಸಾಧನ

Published:
Updated:
ನೆಲ ಒರೆಸುವ ಸಾಧನ

ಪ್ರೆಸ್ಟೀಜ್ ಸಂಸ್ಥೆ ನೂತನ ನೆಲ ಒರೆಸುವ ಸಾಧನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಠಿಣ ಕೊಳೆಯನ್ನು ತೆಗೆಯುತ್ತದೆ. ಗುಡಿಸುವುದು, ಒರೆಸುವುದು ಹಾಗೂ ನಲವನ್ನು ಉಜ್ಜುವಂತಹ ಅನೇಕ ಕೆಲಸಗಳಿಗೆ ಇದು ನೆರವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸುಲಭವಾಗಿ ಬಳಸಲು ನೆರವಾಗುವಂತೆ ಉದ್ದದ ವಯರ್‌ ಹೊಂದಿದ್ದು, ಗ್ರಾನೈಟ್‌, ಮೊಸೈಕ್‌, ಮಾರ್ಬಲ್, ಟೈಲ್ಸ್‌ ಹಾಗೂ ಮರದ ನೆಲದಲ್ಲಿಯೂ ಬಳಸಲು ಸಾಧ್ಯ ಎಂದು ಕಂಪೆನಿ ಹೇಳಿದೆ. ಬೆಲೆ ₹8.495 ರಿಂದ ಆರಂಭ. ಪ್ರಮುಖ ಇ–ಕಾಮರ್ಸ್‌ ತಾಣಗಳು ಹಾಗೂ ಪ್ರೆಸ್ಟೀಜ್ ಸ್ಮಾರ್ಟ್‌ ಕಿಚನ್‌ ಮಳಿಗೆಗಳಲ್ಲಿ ಇವು ಲಭ್ಯ.

ನೂತನ ಹವಾನಿಯಂತ್ರಕ

ರಿಕನೆಕ್ಟ್‌ ಕಂಪೆನಿ ನೂತನ ಹವಾನಿಯಂತ್ರಕವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಡಿಮೆ ವಿದ್ಯುತ್‌ ಬಳಸಿ ಇದು ಕಾರ್ಯನಿರ್ವಹಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಹವಾನಿಯಂತ್ರಣಕ್ಕೆ ಕಂಪೆನಿ 5 ವರ್ಷಗಳ ವಾರಂಟಿ ನೀಡಿದೆ. ತಾಮ್ರದ ಕಂಡೆನ್ಸರ್‌, ಎವಾಪೊರೇಟರ್‌ ಮತ್ತು ಕೊಳವೆಗಳನ್ನು ಬಳಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತವೆ. ನವೀನ ವಿನ್ಯಾಸಗಳಲ್ಲಿ ಲಭ್ಯವಿದ್ದು, ಬೆಲೆ ₹18,990ರಿಂದ ಆರಂಭ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry