ಪಾಕ್‌ ದಿನಾಚರಣೆಯಲ್ಲಿ ಭಾರತದ ಅಧಿಕಾರಿಗಳು ಭಾಗಿ

7

ಪಾಕ್‌ ದಿನಾಚರಣೆಯಲ್ಲಿ ಭಾರತದ ಅಧಿಕಾರಿಗಳು ಭಾಗಿ

Published:
Updated:

ಇಸ್ಲಾಮಾಬಾದ್‌: ಶುಕ್ರವಾರ ಇಲ್ಲಿ ನಡೆದ ಪಾಕಿಸ್ತಾನ ದಿನಾಚರಣೆಯಲ್ಲಿ ಇದೇ ಪ್ರಥಮ ಬಾರಿಗೆ ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಪಾಲ್ಗೊಂಡಿದ್ದರು.

ಭಾರತಕ್ಕೆ ಶಾಂತಿ ಸಂದೇಶ ರವಾನಿಸಲು ಮತ್ತು ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರು, ಸೇನಾ ಅಧಿಕಾರಿಗಳಿಗೆ ಮತ್ತು ರಾಜತಾಂತ್ರಿಕರಿಗೆ ಆಹ್ವಾನ ನೀಡಿದ್ದರು ಎಂದು ಹೇಳಲಾಗಿದೆ.

ಪಾಕಿಸ್ತಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಮಮ್ನೂನ್‌ ಹುಸೇನ್‌, ಭಾರತ ಕದನ ವಿರಾಮ ಉಲ್ಲಂಘಿಸುತ್ತಿದೆ. ಭಾರತದ ನಡೆಯಿಂದ ಪ್ರಾದೇಶಿಕ ಶಾಂತಿಗೆ ಧಕ್ಕೆಯಾಗಿದೆ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry