ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಯಿಸ್ ಹ್ಯಾಮಿಲ್ಟನ್‌ ಶರವೇಗದ ಚಾಲನೆ

ಆಸ್ಟ್ರೇಲಿಯನ್‌ ಫಾರ್ಮುಲಾ ಒನ್‌ ಗ್ರ್ಯಾಂಡ್‌ ಪ್ರಿಕ್ಸ್‌: ಅಭ್ಯಾಸದಲ್ಲಿ ಬಿರುಗಾಳಿಯ ವೇಗ
Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕಳೆದ ವರ್ಷ ಬಿರುಗಾಳಿಯ ವೇಗದಲ್ಲಿ ಸಾಗಿ ಪ್ರೇಕ್ಷಕರನ್ನು ರಂಜಿಸಿದ್ದ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ ಆಸ್ಟ್ರೇಲಿಯನ್‌ ಫಾರ್ಮುಲಾ ಒನ್‌ ಗ್ರ್ಯಾನ್‌ ಪ್ರೀ ರೇಸ್‌ನಲ್ಲಿ ಭರವಸೆ ಮೂಡಿಸಿದ್ದಾರೆ.

ಶುಕ್ರವಾರ ನಡೆದ ಮೊದಲ ಅಭ್ಯಾಸದ ಚಾಲನೆಯಲ್ಲಿ ಅವರು ಅತ್ಯಂತ ವೇಗದ ಲ್ಯಾಪ್ ಪೂರೈಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಮರ್ಸಿಡಿಸ್‌ನಲ್ಲಿ ಮೊದಲ ಸೆಷನ್‌ ಅನ್ನು 1ನಿಮಿಷ:24.026ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿದ ಬ್ರಿಟನ್‌ನ ಹ್ಯಾಮಿಲ್ಟನ್‌ ಎರಡನೇ ಸೆಷನ್‌ಗಾಗಿ 1ನಿಮಿಷ:23.931ಸೆಕೆಂಡು ತೆಗೆದುಕೊಂಡರು. 1ನಿಮಿಷ:24.058ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ರೆಡ್‌ ಬುಲ್ಸ್‌ ಮ್ಯಾಕ್ಸ್‌ನ ಚಾಲಕನನ್ನು ಅವರು ಹಿಂದಿಕ್ಕಿದರು.

1ನಿ:24.159ಸೆಕೆಂಡುಗಳಲ್ಲಿ ಗುರಿ ತಲುಪಿದ ಮರ್ಸಿಡಿಸ್‌ ತಂಡದ ವಾಲ್ಟೆರಿ ಬೊಟ್ಟಾಸ್‌ ಮೂರನೇಯವರಾದರು. ಫೆರಾರಿ ತಂಡದ ಕಿಮಿ ರೈಕೊನೆನ್‌ ಮತ್ತು ಸೆಬಾಸ್ಟಿಯನ್‌ ವೆಟೆಲ್‌ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು. ಆತಿಥೇಯರ ಭರವಸೆಯಾಗಿದ್ದ ಡ್ಯಾನಿಯೆಲ್‌ ರಿಕ್ಯಾರ್ಡೊ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅರ್ಹತಾ ಸುತ್ತಿನ ಚಾಲನೆ ಶನಿವಾರ ನಡೆಯಲಿದೆ.

ಐದನೇ ಪ್ರಶಸ್ತಿಯ ಮೇಲೆ ಕಣ್ಣು

ವಿಶ್ವಮಟ್ಟದ ಐದನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹ್ಯಾಮಿಲ್ಟನ್‌ ದಾಖಲೆಯತ್ತ ಹೆಜ್ಜೆ ಹಾಕಿದ್ದಾರೆ. ಐದು ಪ್ರಶಸ್ತಿಯ ಕನಸು ನನಸಾದರೆ ಅವರು ಜುವಾನ್‌ ಮ್ಯಾನುಯೆಲ್‌ ಫಾಂಗಿಯೊ ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ. ಮೈಕೆಲ್ ಶುಮಾಕರ್‌ ಅವರ ವಿಶ್ವದಾಖಲೆ ಮುರಿಯಲು ಮತ್ತೂ ಎರಡು ಪ್ರಶಸ್ತಿಗಳನ್ನು ಮ್ಯಾನುಯೆಲ್ ಗೆಲ್ಲಬೇಕಾಗಿದೆ.

**

ಫೋರ್ಸ್ ಇಂಡಿಯಾ ಹೆಸರು ಬದಲು ಇಲ್ಲ

ಈ ಋತುವಿನಲ್ಲಿ ತಂಡದ ಹೆಸರು ಬದಲಾಯಿಸದೇ ಇರಲು ಫೋರ್ಸ್ ಇಂಡಿಯಾ ನಿರ್ಧರಿಸಿದೆ. ‘ಹೊಸ ಹೆಸರು ಮನಸ್ಸಿನಲ್ಲಿ ಇದೆ. ಆದರೆ ಈ ಋತುವಿನಲ್ಲಿ ಅದರ ಅಡಿಯಲ್ಲಿ ಸ್ಪರ್ಧಿಸಲು ತಂಡ ಸಜ್ಜಾಗಿಲ್ಲ’ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಒಟ್ಮರ್‌ ಸಫ್ನಾರ್ ತಿಳಿಸಿದರು.

‘ಪಾಲುದಾರರು, ಪ್ರಾಯೋಜಕರು ಮತ್ತು ಉದ್ಯೋಗಿಗಳ ಜೊತೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ನಂತರ ಎಫ್‌ಐಎ ಹಾಗೂ ಎಫ್‌ಒಎಮ್‌ಗೆ ವಿಷಯ ತಿಳಿಸಿದ್ದು ಕಾಲಾವಕಾಶ ನೀಡಿದ್ದಾರೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT