ಮಾರತ್‌ಹಳ್ಳಿಯಲ್ಲಿ ತನಿಷ್ಕ್‌ ಹೊಸ ಷೋರೂಂ ಉದ್ಘಾಟನೆ

7

ಮಾರತ್‌ಹಳ್ಳಿಯಲ್ಲಿ ತನಿಷ್ಕ್‌ ಹೊಸ ಷೋರೂಂ ಉದ್ಘಾಟನೆ

Published:
Updated:

ಬೆಂಗಳೂರು: ಚಿನ್ನಾಭರಣಗಳ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ತನಿಷ್ಕ್‌, ನಗರದ ಮಾರತ್‌ಹಳ್ಳಿಯಲ್ಲಿ ತನ್ನ ಹೊಸ ಷೋರೂಂ ಆರಂಭಿಸಿದೆ.

ಇದು ಸಂಸ್ಥೆಯ 249ನೇ ಷೋರೂಂ ಆಗಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ವಿಶಿಷ್ಟ ವಿನ್ಯಾಸದ ಆಭರಣಗಳು ಮತ್ತು ವಿವಾಹ ಆಭರಣಗಳ ವ್ಯಾಪಕ ಶ್ರೇಣಿಯೂ ಇಲ್ಲಿದೆ.

ಟೈಟಾನ್‌ ಕಂಪನಿಯ ಚಿನ್ನಾಭರಣ ವಿಭಾಗದ ಸಿಇಒ ಸಿ. ಕೆ. ವೆಂಕಟರಾಮನ್‌ ಮತ್ತು ಸಂಸ್ಥೆಯ ಪ್ರಾದೇಶಿಕ ವಹಿವಾಟು ಮ್ಯಾನೇಜರ್‌ ಶ್ರೀಕಾಂತ್‌ ಸುದರ್ಶನ್‌ ಅವರು  ಷೋರೂಂ ಉದ್ಘಾಟಿಸಿದರು.

ಹೊಸ ಮಳಿಗೆಯ ಆರಂಭೋತ್ಸವದ ಕೊಡುಗೆಯಾಗಿ, 10 ಗ್ರಾಂಗಳ ಚಿನ್ನಾಭರಣ ಅಥವಾ ₹ 10 ಸಾವಿರ ಮೊತ್ತದ ವಜ್ರದ ಆಭರಣಗಳ ಖರೀದಿಗೆ ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗುತ್ತಿದೆ. ಇದೇ 25ರವರೆಗೆ ಈ ಕೊಡುಗೆ ಇರಲಿದೆ.

ಷೋರೂಂನಲ್ಲಿ ಇರುವ ಕ್ಯಾರಟ್‌ ಮೀಟರ್‌, ಚಿನ್ನದ ಶುದ್ಧತೆಯ ನಿಖರ ಖಾತರಿ ಮತ್ತು ಹಳೆಯ ಚಿನ್ನದ ಅತ್ಯುತ್ತಮ ವಿನಿಮಯದ ಭರವಸೆ ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry