ನಾಯಕನಹಟ್ಟಿ – ತಿಪ್ಪೇಶನ ಹುಂಡಿ ಹಣದ ಎಣಿಕೆ

7

ನಾಯಕನಹಟ್ಟಿ – ತಿಪ್ಪೇಶನ ಹುಂಡಿ ಹಣದ ಎಣಿಕೆ

Published:
Updated:

ನಾಯಕನಹಟ್ಟಿ: ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಂತರ ಹುಂಡಿ ಹಣದ ಎಣಿಕೆ ಕಾರ್ಯವನ್ನು ಶುಕ್ರವಾರ ದೇವಾಲಯದ ಆವರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.

ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮೊದಲು ಹೊರಮಠ ದೇವಾಲಯದಲ್ಲಿ ಮುಜುರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ಉಪ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಬೆಳಗ್ಗೆ 9ಕ್ಕೆ ಶುರುವಾದ ಎಣಿಕೆ ಕಾರ್ಯ 1ಗಂಟೆಗೆ ಮುಕ್ತಾಯವಾಯಿತು.

ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 5ಗಂಟೆಗೆ ಸಂಪೂರ್ಣವಾಗಿ ಮುಕ್ತಾಯವಾಯಿತು. ಹೊರಮಠದಲ್ಲಿ ₹ 10,07,095 ಒಳಮಠದಲ್ಲಿ ₹ 25,71,380 ಹಾಗೂ ಎರಡು ದೇವಾಲಯದ ಸೇವಾರ್ಥಗಳಿಂದ ₹ 26,93,760 ಸಂಗ್ರಹವಾಗಿದೆ. ಒಟ್ಟಾರೆಯಾಗಿ ಸದರಿ ವರ್ಷದ ಜಾತ್ರೆಯಲ್ಲಿ ₹ 62,72,235 ಹಣ ಸಂಗ್ರಹವಾಗಿದೆ.

ಕಳೆದ ವರ್ಷ ಜಾತ್ರೆ ಮುಗಿದ ನಂತರ ಎಣಿಕೆ ಕಾರ್ಯ ಮಾಡಿದಾಗ ಎರಡು ದೇವಾಲಯಗಳಿಂದ ಹುಂಡಿ ಹಾಗೂ ವಿವಿಧ ಸೇವಾರ್ಥಗಳಿಂದ ₹ 47.30ಲಕ್ಷ ಸಂಗ್ರಹವಾಯಿತು. ದೇವಾಲಯದಲ್ಲಿ ಸಂಗ್ರವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.

ಇದೇ ವೇಳೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್, ಸದಸ್ಯರಾದ ತಿಪ್ಪೇಸ್ವಾಮಿ ರೆಡ್ಡಿ, ಗೋವಿಂದರಾಜ್, ರುದ್ರಮುನಿ, ಮುನಿಯಪ್ಪ, ಪ್ರಧಾನ ಅರ್ಚಕ ಗಂಗಾಧರಪ್ಪ, ತಹಶೀಲ್ದಾರ್ ಕೆ.ಆರ್.ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ಎಸ್‌.ಪಿ.ಬಿ.ಮಹೇಶ್, ಉಪ ತಹಶೀಲ್ದಾರ್ ಟಿ.ಜಗದೀಶ್, ಕಂದಾಯ ನಿರೀಕ್ಷಕ ಜಗದೀಶ್, ಪ್ರಕಾಶ್, ಮಹಮ್ಮದ್‌ಉಸ್ಮಾನ್, ಕೆನರಾಬ್ಯಾಂಕ್ ವ್ಯವಸ್ಥಾಪಕ ಈಶ್ವರಪ್ಪ, ಸಿಬ್ಬಂದಿಗಳಾದ ಪ್ರವೀಣ್‌ಕುಮಾರ್, ರವಿಕುಮಾರ್, ಮಂಜುನಾಥ್, ಎಂ.ಬಿ.ಮಹಾಸ್ವಾಮಿ, ಎಸ್.ಸತೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry