31ರಿಂದ ಲೇಪಾಕ್ಷಿ ಉತ್ಸವ

7

31ರಿಂದ ಲೇಪಾಕ್ಷಿ ಉತ್ಸವ

Published:
Updated:
31ರಿಂದ ಲೇಪಾಕ್ಷಿ ಉತ್ಸವ

ಬೆಂಗಳೂರು: ಆಂಧ್ರಪ್ರದೇಶ ಪ್ರವಾಸೋದ್ಯಮ ಪ್ರಾಧಿಕಾರವು ಲೇಪಾಕ್ಷಿಯಲ್ಲಿ ಇದೇ 31ರಿಂದ ಏಪ್ರಿಲ್‌ 1ರವರೆಗೆ ‘ಲೇಪಾಕ್ಷಿ ಉತ್ಸವ’ ಹಮ್ಮಿಕೊಂಡಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ, ‘ಇದು ಕಲೆ ಮತ್ತು ಸಾಂಸ್ಕೃತಿಕ ಹಬ್ಬವಾಗಿದ್ದು, ಅದ್ಧೂರಿಯಾಗಿ ನಡೆಯಲಿದೆ. ಲಕ್ಷಾಂತರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಉತ್ಸವದ ಪ್ರಯುಕ್ತ ಭಾನುವಾರ (ಇದೇ 25) ಬೆಳಿಗ್ಗೆ 9ಕ್ಕೆ ಸೈಕಲ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12ಕ್ಕೆ ಬಲೂನು ಹಾರಿಸುವ ಕಾರ್ಯಕ್ರಮ ಇದೆ.

ಇದೇ 30ರಂದು ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. 31ರಂದು ಸಂಜೆ 6.30ಕ್ಕೆ ಗ್ರಾಮೋತ್ಸವ ನಡೆಯಲಿದೆ. ಮರುದಿನ ಬೆಳಿಗ್ಗೆ 9ಕ್ಕೆ ಗ್ರಾಮೀಣ ಕ್ರೀಡೆಗಳು ನಡೆಯಲಿವೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ www.lepakshiutsavam2018.com ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry