ಆಕಸ್ಮಿಕ ಬೆಂಕಿಗೆ 13 ಗುಡಿಸಲು ಭಸ್ಮ

7

ಆಕಸ್ಮಿಕ ಬೆಂಕಿಗೆ 13 ಗುಡಿಸಲು ಭಸ್ಮ

Published:
Updated:
ಆಕಸ್ಮಿಕ ಬೆಂಕಿಗೆ 13 ಗುಡಿಸಲು ಭಸ್ಮ

ತುರುವೇಕೆರೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಮೀನಾಕ್ಷಿನಗರದಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು 13 ಗುಡಿಸಲು ಸುಟ್ಟಿವೆ.

ಎಲ್ಲ ಗುಡಿಸಲುಗಳೂ ಕೂಲಿಕಾರರದ್ದಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗುಡಿಸಲಿನಲ್ಲಿದ್ದ ವಸ್ತುಗಳು, ಆಹಾರ ಪದಾರ್ಥಗಳು ಸುಟ್ಟು ಕರಕಲಾಗಿವೆ. ನೇತ್ರಾವತಿ, ಶಿವನಂಜಪ್ಪ, ವೆಂಕಟಯ್ಯ, ಪಾಂಚಾಳಮ್ಮ, ನರಸಮ್ಮ, ನಫ್ರಿನವಾಜ್, ನಾಗಮ್ಮ, ವಸಂತಮ್ಮ, ನಳಿನ, ವರಲಕ್ಷ್ಮಿ, ಮಂಜುಳ, ಅಂಬಿಕ. ಗುಡಿಸಲು ಕಳೆದುಕೊಂಡ ಸಂತ್ರಸ್ತರಾಗಿದ್ದಾರೆ. ಮೊದಲು ಒಂದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿತು.

ನೋಡು ನೋಡುತ್ತಿದ್ದಂತೆಯೇ ಇತರ 12 ಗುಡಿಸಲುಗಳಿಗೆ ವ್ಯಾಪಿಸಿತು. ಅಗ್ನಿ ಶಾಮಕ ದಳ, ಪೊಲೀಸರು ನೆರವಿಗೆ ಧಾವಿಸಿ ಬೆಂಕಿ ನಂದಿಸಿದರು ಎಂದು ಸಂತ್ರಸ್ತರು ವಿವರಿಸಿದರು. ಶಾಸಕ ಎಂ.ಟಿ ಕೃಷ್ಣಪ್ಪ, ತಹಶೀಲ್ದಾರ್ ಪ್ರದೀಪ್‌ಕುಮಾರ್, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂತ್ರಸ್ತರನ್ನು ಭೇಟಿ ನೀಡಿ ಸಾಂತ್ವನ ಹೇಳಿದರು.

ನಷ್ಟ ಅಂದಾಜು: ದವಸ ಧಾನ್ಯ, ಬಟ್ಟೆ, ಪಾತ್ರೆ, ಕೋಳಿಗಳು, ಟಿವಿಎಸ್ ಬೈಕ್, ಸೈಕಲ್ ಅಲ್ಪಸ್ವಲ್ಪ ಹಣ ಸೇರಿ ₹ 1.30 ಲಕ್ಷ ನಷ್ಟ ಸಂಭವಿಸಿದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಕಂದಾಯ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry