4

ಟ್ರಂಪ್‌ ವಿಚಾರದಲ್ಲಿ ಸುಮ್ಮನಿರಲು ಬೆದರಿಕೆ ಒಡ್ಡಲಾಗಿತ್ತು: ಸ್ಟಾರ್ಮಿ ಡೇನಿಯಲ್‌ ಆರೋಪ

Published:
Updated:
ಟ್ರಂಪ್‌ ವಿಚಾರದಲ್ಲಿ ಸುಮ್ಮನಿರಲು ಬೆದರಿಕೆ ಒಡ್ಡಲಾಗಿತ್ತು: ಸ್ಟಾರ್ಮಿ ಡೇನಿಯಲ್‌ ಆರೋಪ

ವಾಷಿಂಗ್ಟನ್‌: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ಹೊಂದಿದ್ದ ಸಂಬಂಧದ ಬಗ್ಗೆ ಸುಮ್ಮನಿರುವಂತೆ ಬೆದರಿಕೆ ಹಾಕಲಾಗಿತ್ತು’ ಎಂದು ನೀಲಿತಾರೆ ಸ್ಟಾರ್ಮಿ ಡೇನಿಯಲ್‌ ಬಹಿರಂಗಪಡಿಸಿದ್ದಾರೆ.

ಸಿಬಿಎಸ್‌ ವಾಹಿನಿ ‘60 ಮಿನಿಟ್ಸ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟ್ರಂಪ್‌ ಜೊತೆ 2006ರಲ್ಲಿ ಒಂದು ಸಲ ಯಾವುದೇ ಸುರಕ್ಷತೆಯಿಲ್ಲದೇ ಲೈಂಗಿಕ ಸಂಪರ್ಕ ಹೊಂದಿದ್ದೆನು. 2011ರಲ್ಲಿ ಈ ವಿಚಾರವನ್ನು ತಿಳಿಸಲು ಮುಂದಾಗಿದ್ದ ವೇಳೆ ಲಾಸ್‌ವೆಗಾಸ್‌ನ ಪಾರ್ಕಿಂಗ್‌ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಬೆದರಿಕೆ ಒಡ್ಡಿದ್ದರು’ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ನಮ್ಮಿಬ್ಬರ ಸಂಬಂಧ ಬಹಿರಂಗಪಡಿಸದಂತೆ, 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಡೊನಾಲ್ಡ್‌ ಟ್ರಂಪ್‌ ಅವರು ನನ್ನ ಜೊತೆ ಗುಪ್ತ ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕಾಗಿ ರೂ. 84.22 ಲಕ್ಷ (1.30 ಲಕ್ಷ ಡಾಲರ್‌) ಹಣ ನೀಡಿದ್ದರು’ ಎಂದು ತಿಳಿಸಿದ್ದಾರೆ.

ಡೇನಿಯಲ್‌ ಜೊತೆಗೆ ಟ್ರಂಪ್‌ ಸಂಬಂಧ ಹೊಂದಿದ್ದರು ಎಂಬ ವಿಚಾರವನ್ನು ಶ್ವೇತಭವನ ಸ್ಪಷ್ಟವಾಗಿ ನಿರಾಕರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry